ಸೋನಾಲಿ ಫೋಗಟ್ ಸಾವು: ಹತ್ಯೆ ಪ್ರಕರಣ ದಾಖಲಿಸಿದ ಗೋವಾ ಪೊಲೀಸರು
Update: 2022-08-25 23:43 IST
ಹೊಸದಿಲ್ಲಿ, ಆ. 25: ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿಗೆ ಸಂಬಂಧಿಸಿ ಗೋವಾ ಪೊಲೀಸರು ಹತ್ಯೆ ಪ್ರಕರಣ ದಾಖಲಿಸಿದ್ದಾರೆ. ಫೋಗಟ್ ಕುಟುಂಬ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಭಾರತೀಯ ದಂಡ ಸಂಹಿತೆಯ 302 ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಕುಟುಂಬ ಅನುಮತಿ ನೀಡಿದ ಬಳಿಕ ಫೋಗಟ್ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
‘‘72 ಗಂಟೆಗಳ ಬಳಿಕ ಮೃತದೇಹ ಕ್ಷಯಿಸುತ್ತದೆ. ಆದುದರಿಂದ ನಮ್ಮ ವಕೀಲರು ಹಾಗೂ ವೈದ್ಯರ ಸಲಹೆಯಂತೆ ಮರಣೋತ್ತರ ಪರೀಕ್ಷೆ ನಡೆಸಲು ಅನುಮತಿ ನೀಡಿದೆವು’’ ಎಂದು ಫೋಗಟ್ ಅವರ ಸೋದರಳಿಯ ಮೋನಿಂದರ್ ಫೋಗಟ್ ತಿಳಿಸಿದ್ದಾರೆ.
ಸೋನಾಲಿ ಫೋಗಟ್ ಅವರು ಆಗಸ್ಟ್ 23ರಂದು ಮೃತಪಟ್ಟಿದ್ದರು. ಆದರೆ ‘‘ತನ್ನ ಸಹೋದರಿಯ ಸಾವಿನ ಹಿಂದೆ ಪಿತೂರಿ ಇದೆ’’ ಎಂದು ಸೋನಾಲಿ ಫೋಗಟ್ ಸಹೋದರ ಬುಧವಾರ ಆರೋಪಿಸಿದ್ದರು.