ಉದ್ಯೋಗ ವಂಚನೆ: ಜಾಗೃತಿ ಅಗತ್ಯ

Update: 2022-08-25 18:41 GMT

ಮಂಗಳೂರಲ್ಲಿ ಉದ್ಯೋಗ ವಂಚನೆ ಕೇಸ್ ಮತ್ತೆ ಬಯಲಾಗಿದೆ. ಈ ಪ್ರಕರಣದಲ್ಲಿ 150 ಮಂದಿಯಿಂದ 2.50 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಪಡೆದು ಉದ್ಯೋಗ ಕೊಡದೆ ವಂಚಿಸಿದ್ದು, ಇದು ಮಂಗಳೂರಲ್ಲಿ ಉದ್ಯೋಗ ವಂಚನಾ ಜಾಲದ ಕರಾಳತೆ ಯಾವ ರೀತಿಯಲ್ಲಿದೆ ಎಂಬುದನ್ನು ಬಯಲು ಮಾಡುತ್ತದೆ.

ಮಂಗಳೂರಲ್ಲಿ ಅನೇಕ ಜಾಬ್ ಕನ್ಸಲ್ಟನ್ಸಿಗಳಿದ್ದು ಅದರಲ್ಲಿ ಕೆಲವು ಉದ್ಯೋಗದ ಆಮಿಷ ತೋರಿಸಿ ಅಡ್ಮಿಷನ್/ ಎಂಟ್ರೆನ್ಸ್ ಫೀಸ್ ಎಂದು ಇಂತಿಷ್ಟು ಹಣವನ್ನು, ಶೈಕ್ಷಣಿಕ ದಾಖಲೆಗಳನ್ನು ಪಡೆದು ಉದ್ಯೋಗ ಕೊಡಿಸುತ್ತೇವೆ ಎಂದು ಹೇಳಿ ನೆಪ ಮಾತ್ರಕ್ಕೆ ಯಾವುದೋ ಒಂದು ಕೆಲಸವನ್ನು ತೋರಿಸಿ ನಂತರ ಇಂತಿಷ್ಟು ಶೇಕಡಾವಾರು ಹಣವನ್ನು ನೀಡಬೇಕೆಂದು ಬ್ಲ್ಯಾಕ್‌ಮೇಲ್ ಮಾಡಲಾಗುತ್ತ್ತಿದೆ. ಈ ಜಾಲಕ್ಕೆ ಬಿದ್ದು ಅನೇಕ ನಿರುದ್ಯೋಗಿಗಳು ಹಣ ಕಳೆದುಕೊಳ್ಳುತ್ತಿದ್ದಾರೆ.

ಬಹಳ ಕಷ್ಟಪಟ್ಟು ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕಾಗಿ ಪರಿಪಾಟಲು ಪಡುತ್ತಿರುವ ಯುವಜನತೆಯನ್ನು ಹೀಗೆ ಕಾನೂನು ವಿರುದ್ಧವಾಗಿ ವಂಚಿಸುತ್ತಿರುವ ಮಂಗಳೂರಲ್ಲಿರುವ ಜಾಬ್ ಕನ್ಸಲ್ಟನ್ಸಿಗಳ ವಿರುದ್ಧ್ಧ ಪೊಲೀಸ್ ಇಲಾಖೆ ಕೂಡಲೇ ಕ್ರಮಕೈಗೊಳ್ಳಬೇಕಿದೆ.

Writer - -ಶಂಶೀರ್ ಬುಡೋಳಿ

contributor

Editor - -ಶಂಶೀರ್ ಬುಡೋಳಿ

contributor

Similar News