×
Ad

ಕಾಂಗ್ರೆಸ್‌ ಗೆ ಹಿರಿಯ ನಾಯಕ ಗುಲಾಂ ನಬಿ ಆಝಾದ್ ರಾಜೀನಾಮೆ

Update: 2022-08-26 11:40 IST
Photo:PTI

ಹೊಸದಿಲ್ಲಿ:  ಹಿರಿಯ ನಾಯಕ ಹಾಗೂ  ಮಾಜಿ ಕೇಂದ್ರ ಸಚಿವ ಗುಲಾಂ ನಬಿ ಆಝಾದ್ ( Congress veteran and former Union Minister Ghulam Nabi Azad)ಶುಕ್ರವಾರ ಕಾಂಗ್ರೆಸ್ ತ್ಯಜಿಸಿದ್ದಾರೆ (Quits Congress)ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. 

ಕಾಂಗ್ರೆಸ್ ಪಕ್ಷದೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿರುವ ಗುಲಾಂ ನಬಿ ಆಝಾದ್ ಅವರು ಜಿ-23 ಅಥವಾ 23 "ಭಿನ್ನಮತೀಯರ" ಗುಂಪಿನ ಪ್ರಮುಖ ಸದಸ್ಯರಾಗಿದ್ದರು. ಅವರು 2020 ರಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು. ಸಂಘಟನೆಯ ಸಂಪೂರ್ಣ ಪುನರ್ ರಚನೆಗೆ ಹಾಗೂ  ಪೂರ್ಣಕಾಲಿಕ  ನಾಯಕತ್ವಕ್ಕೆ ಕರೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News