×
Ad

ಅನಿಲ್ ಕುಂಬ್ಳೆಯವರನ್ನು ಮುಖ್ಯ ಕೋಚ್ ಹುದ್ದೆಯಲ್ಲಿ ಮುಂದುವರಿಸದಿರಲು ಪಂಜಾಬ್ ನಿರ್ಧಾರ

Update: 2022-08-26 13:45 IST
Photo:PTI

ಹೊಸದಿಲ್ಲಿ: ಐಪಿಎಲ್ ನ ಪಂಜಾಬ್ ಕಿಂಗ್ಸ್ (Punjab kings)ತಂಡವು  ಮುಖ್ಯ ಕೋಚ್ ಸ್ಥಾನದಲ್ಲಿ ಅನಿಲ್ ಕುಂಬ್ಳೆ (Anil Kumble)ಅವರನ್ನು ಮುಂದುವರಿಸದಿರಲು ನಿರ್ಧರಿಸಿದೆ.

ಅನಿಲ್ ಕುಂಬ್ಳೆ ಅವರ ಮುಖ್ಯ ಕೋಚ್ ಗುತ್ತಿಗೆ ಅವಧಿ ಮುಗಿಯಲಿದ್ದು, ಮುಂದಿನ ಅವಧಿಗೆ ಕುಂಬ್ಳೆ ಅವರನ್ನು ಮುಂದುವರಿಸಲು ಪಂಜಾಬ್ ಕಿಂಗ್ಸ್ ತಂಡ ಒಲವು ಹೊಂದಿಲ್ಲ ಎಂದು ತಿಳಿದುಬಂದಿದೆ.

ಈ ಕುರಿತು ಇಎಸ್ ಪಿಎನ್ ಕ್ರಿಕ್ ಇನ್ ಫೋ ವರದಿ ಮಾಡಿದೆ. ಪಂಜಾಬ್ ತಂಡದ ಮಾಲಿಕರ ಮಂಡಳಿ ಕುಂಬ್ಳೆಯವರನ್ನು ಮುಂದುವರಿಸದಿರಲು ನಿರ್ಧರಿಸಿದೆ ಎಂದು ಹೇಳಿದೆ.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕುಂಬ್ಳೆ ಅವರು 2020ರ ಐಪಿಎಲ್ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು. ಕುಂಬ್ಳೆ ಅವಧಿಯಲ್ಲಿ ಪಂಜಾಬ್ ಕಿಂಗ್ಸ್ 42 ಪಂದ್ಯಗಳನ್ನು ಆಡಿದ್ದು, ಈ ಪೈಕಿ 18ರಲ್ಲಿ ಜಯ ಹಾಗೂ 22ರಲ್ಲಿ ಸೋಲು ಕಂಡಿದೆ. ಎರಡು ಪಂದ್ಯ ಟೈ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News