ದೇಶದಲ್ಲಿನ 24 ವಿವಿಗಳು ನಕಲಿ; ದಿಲ್ಲಿಯಲ್ಲಿ ಗರಿಷ್ಠ ನಕಲಿ ವಿವಿಗಳು: ಪಟ್ಟಿ ಬಿಡುಗಡೆಗೊಳಿಸಿದ ಯುಜಿಸಿ

Update: 2022-08-26 10:47 GMT

ಹೊಸದಿಲ್ಲಿ: ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)(UGC) ಇಂದು 24 ಸ್ವಘೋಷಿತ ವಿಶ್ವವಿದ್ಯಾಲಯಗಳನ್ನು ನಕಲಿ ಎಂದು ಘೋಷಿಸಿದೆ ಹಾಗೂ ಇನ್ನೂ ಎರಡು ವಿವಿಗಳು ನಿಯಮಗಳನ್ನು ಉಲ್ಲಂಘಿಸಿದೆ ಎಂದು ಹೇಳಿದೆ. ರಾಜ್ಯವಾರು ನಕಲಿ ವಿವಿಗಳ ಪಟ್ಟಿಯನ್ನು ಯುಜಿಸಿ ವೆಬ್‍ಸೈಟ್‍ನಲ್ಲಿ ಒದಗಿಸಲಾಗಿದೆ indianexpress.com ವರದಿ ಮಾಡಿದೆ.

ಗರಿಷ್ಠ ಎಂಟು ನಕಲಿ ವಿಶ್ವವಿದ್ಯಾಲಯಗಳು ದಿಲ್ಲಿಯಲ್ಲಿವೆ. ಅಲ್ಲಿನ ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಎಂಡ್ ಫಿಸಿಕಲ್ ಹೆಲ್ತ್ ಸಾಯನ್ಸಸ್, ಕಮರ್ಷಿಯಲ್ ಯುನಿವರ್ಸಿಟಿ ಲಿ,  ಯುನೈಟೆಡ್ ನೇಷನ್ಸ್ ಯುನಿವರ್ಸಿಟಿ, ವೊಕೇಶನಲ್ ಯುನಿವರ್ಸಿಟಿ, ಎಡಿಆರ್-ಸೆಂಟ್ರಿಕ್ ಜುರಿಡಿಕಲ್ ಯುನಿವರ್ಸಿಟಿ, ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸಾಯನ್ಸ್ ಎಂಡ್ ಇಂಜಿನಿಯರಿಂಗ್, ವಿಶ್ವಕರ್ಮ ಓಪನ್ ಯುನಿವರ್ಸಿಟಿ ಫಾರ್ ಸೆಲ್ಫ್ ಎಂಪ್ಲಾಯ್ಮೆಂಟ್ ಮತ್ತು ಆಧ್ಯಾತ್ಮಿಕ್ ವಿಶ್ವವಿದ್ಯಾಲಯ ಇವುಗಳನ್ನು ನಕಲಿ ವಿವಿಗಳು ಎಂದು ಯುಜಿಸಿ ಘೋಷಿಸಿದೆ.

ಉತ್ತರ ಪ್ರದೇಶದಲ್ಲಿ ಏಳು ನಕಲಿ ವಿವಿಗಳಿದ್ದು ಇವುಗಳಲ್ಲಿ ನೇತಾಜಿ ಸುಭಾಸ್ ಚಂದ್ರ ಬೋಸ್ ವಿವಿ, ಭಾರತೀಯ ಶಿಕ್ಷಾ ಪರಿಷದ್ ಸೇರಿವೆ.

ಉಳಿದಂತೆ  ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಒಡಿಶಾ, ಪುದುಚ್ಚೇರಿ ಮತ್ತು ಆಂಧ್ರ ಪ್ರದೇಶ ಇಲ್ಲಿನ ಕೆಲವೊಂದು ಶಿಕ್ಷಣ ಸಂಸ್ಥೆಗಳೂ ನಕಲಿ ವಿವಿಗಳ ಪಟ್ಟಿಯಲ್ಲಿವೆ.

ಇದನ್ನೂ ಓದಿ: ಅದಾನಿ ಗ್ರೀನ್ ಸಂಸ್ಥೆಯ ಸಾಲದ ಅನುಪಾತದ ಮೇಲೆ ನಿಗಾ ಅಗತ್ಯ; ವರದಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News