ಎಐಎಫ್‌ಎಫ್ ವಿರುದ್ಧ ಅಮಾನತು ಕ್ರಮ ಹಿಂಪಡೆದ ಫಿಫಾ

Update: 2022-08-26 17:49 GMT
Photo:twitter

ಝೂರಿಚ್ , ಆ.26: ವಿಶ್ವ ಫುಟ್ಬಾಲ್ ಆಡಳಿತ ಮಂಡಳಿ ಫಿಫಾ (FIFA)ಶುಕ್ರವಾರ ಎಐಎಫ್‌ಎಫ್ ಮೇಲಿನ ಅಮಾನತನ್ನು (ban lifts) ಹಿಂಪಡೆದಿದೆ. ಸುಪ್ರೀಂಕೋರ್ಟ್ ಇತ್ತೀಚೆಗೆ ಆಡಳಿತಾಧಿಕಾರಿಗಳ ಸಮಿತಿ(ಸಿಒಎ)ಯನ್ನು ರದ್ದುಪಡಿಸಿದ ಬಳಿಕ ಫಿಫಾ ಈ ನಿರ್ಧಾರಕ್ಕೆ ಬಂದಿದೆ.

ಫಿಫಾ ನಿರ್ಧಾರದಿಂದಾಗಿ ಭಾರತವು ಅಕ್ಟೋಬರ್‌ನಲ್ಲಿ ಮಹಿಳೆಯರ ಅಂಡರ್-17 ವಿಶ್ವಕಪ್ ಆತಿಥ್ಯಕ್ಕೆ ಇದ್ದ ಅಡ್ಡಿ ನಿವಾರಣೆಯಾಗಿದೆ.

ಫಿಫಾ ಆ.15ರಂದು ಎಐಎಫ್‌ಎಫ್‌ನ್ನು ಅಮಾನತುಗೊಳಿಸಿತ್ತು. ಫೆಡರೇಶನ್‌ನಲ್ಲಿ ಮೂರನೇ ಪಕ್ಷದ ಹಸ್ತಕ್ಷೇಪವು ಫಿಫಾದ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಹೇಳಿತ್ತು. ಅಮಾನತುಗೊಳಿಸಿದ 11 ದಿನಗಳ ಬಳಿಕ ತನ್ನ ಕ್ರಮವನ್ನು ಹಿಂಪಡೆದುಕೊಂಡಿದೆ.
 
ಫಿಫಾ ಕೌನ್ಸಿಲ್ ಬ್ಯೂರೊ ಅಖಿಲ ಭಾರತ ಫುಟ್ಬಾಲ್ ಒಕ್ಕೂಟದ ಮೇಲಿನ ಅಮಾನತು ಕ್ರಮವನ್ನು ಹಿಂಪಡೆಯಲು ನಿರ್ಧರಿಸಿದೆ ಎಂದು ಫಿಫಾ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News