×
Ad

ಎರಡು ವಾರಗಳಲ್ಲಿ ನೂತನ ಪಕ್ಷ ಆರಂಭ: ಗುಲಾಂ ನಬಿ ಅಝಾದ್ ಆಪ್ತ ಜಿ.ಎಂ. ಸರೂರಿ

Update: 2022-08-27 22:58 IST

ಜಮ್ಮು, ಆ. 27: ಕಾಂಗ್ರೆಸ್‌ನ ಮಾಜಿ ನಾಯಕ ಗುಲಾಂ ನಬಿ ಅಝಾದ್ ಅವರು ತನ್ನ ಸ್ವಂತ ಪಕ್ಷ ಸ್ಥಾಪಿಸಲು ಎಲ್ಲ ಸಿದ್ಧತೆ ನಡೆಸಿದ್ದಾರೆ. ಜಮ್ಮು ಹಾಗೂ ಕಾಶ್ಮೀರದಲ್ಲಿ ಪಕ್ಷದ ಮೊದಲ ಘಟಕ ಮೂರು ವಾರಗಳಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದು ಗುಲಾಂ ನಬಿ ಅಝಾದ್ ಅವರ ಆಪ್ತ ಜಿ.ಎಂ. ಸರೂರಿ ಅವರು ಶನಿವಾರ ತಿಳಿಸಿದ್ದಾರೆ. 

ಜಮ್ಮು ಹಾಗೂ ಕಾಶ್ಮೀರದ 2019 ಆಗಸ್ಟ್ 5ಕ್ಕಿಂತ ಪೂರ್ವದ ಸ್ಥಾನಮಾನದ ಮರು ಸ್ಥಾಪನೆ ಪಕ್ಷದ ಪ್ರಣಾಳಿಕೆಯ ಭಾಗವಾಗಲಿದೆ ಎಂದು ಸರೂರಿ ಅವರು ಪ್ರತಿಪಾದಿಸಿದ್ದಾರೆ. 

ಅಝಾದ್ ಅವರು ಸೆಪ್ಟಂಬರ್ 4ರಂದು ಜಮ್ಮುವಿಗೆ ಭೇಟಿ ನೀಡಲಿದ್ದಾರೆ.   ತನ್ನ ನೂತನ ಪಕ್ಷ ಆರಂಭಿಸುವ ಮುನ್ನ ಅವರು ಹಿತಚಿಂತಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್‌ನ ಜಮ್ಮು ಹಾಗೂ ಕಾಶ್ಮೀರ ಘಟಕದ ಮಾಜಿ ಉಪಾಧ್ಯಕ್ಷ ಸರೂರಿ ಅವರು ತಿಳಿಸಿದ್ದಾರೆ. 

‘‘ನನಗೆ ಈಗ ರಾಷ್ಟ್ರೀಯ ಪಕ್ಷವನ್ನು ಆರಂಭಿಸಬೇಕೆಂಬ ತರಾತುರಿ ಇಲ್ಲ. ಆದರೆ, ಜಮ್ಮು ಹಾಗೂ ಕಾಶ್ಮೀರದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ನಾನು ಪಕ್ಷದ ಘಟಕವೊಂದನ್ನು ಕೂಡಲೇ ಆರಂಭಿಸಲು ನಿರ್ಧರಿಸಿದ್ದೇನೆ’’ ಎಂದು ಅಝಾದ್ ಅವರು ಶುಕ್ರವಾರ ಹೇಳಿದ್ದರು.

ನೂತನ ಪಕ್ಷ ಅಬಿವೃದ್ಧಿ, ಸಮಾಜದ ಎಲ್ಲ ವರ್ಗಗಳ ನಡುವೆ ಏಕತೆ ಹಾಗೂ 2019 ಆಗಸ್ಟ್ 5ಕ್ಕಿಂತ ಹಿಂದಿನ ಜಮ್ಮು ಹಾಗೂ ಕಾಶ್ಮೀರದ ಸ್ಥಾನಮಾನವನ್ನು ಮರು ಸ್ಥಾಪಿಸುವುದಕ್ಕೆ ಗಮನ ಕೇಂದ್ರೀಕರಿಸಲಿದೆ ಎಂದು ಸರೂರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News