ಝಾಕಿಯಾ ಜಾಫ್ರಿ ಪ್ರಕರಣ ಸಂಬಂಧ ಮಾತ್ರ ತೀಸ್ತಾ ಸೆಟಲ್ವಾಡ್ ಬಂಧನವಾಗಿಲ್ಲ: ಸುಪ್ರೀಂಗೆ ಹೇಳಿದ ಗುಜರಾತ್ ಸರಕಾರ

Update: 2022-08-29 12:48 GMT
ತೀಸ್ತಾ ಸೆಟಲ್ವಾಡ್ (File Photo: PTI)

ಹೊಸದಿಲ್ಲಿ: ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್(Teesta Setalvad) ಅವರ ವಿರುದ್ಧ ದಾಖಲಿಸಿರುವ ಎಫ್‍ಐಆರ್ ಝಾಕಿಯಾ ಜಾಫ್ರಿ(Zakia Jafri) ಪ್ರಕರಣದಲ್ಲಿನ ಸುಪ್ರೀಂ ಕೋರ್ಟಿನ ತೀರ್ಪಿನ ಮೇಲಷ್ಟೇ ಆಧಾರಿತವಾಗಿಲ್ಲ, ಬದಲು ಪುರಾವೆಗಳ ಬೆಂಬಲದೊಂದಿಗೆ ದಾಖಲಿಸಲಾಗಿದೆ ಎಂದು ಗುಜರಾತ್ ಸರಕಾರ(Gujarat government) ಸುಪ್ರೀಂ ಕೋರ್ಟಿಗೆ(Supreme Court) ಇಂದು ತಿಳಿಸಿದೆ.

ಗುಜರಾತ್‍ನಲ್ಲಿ 2002 ರಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ನಕಲಿ ಸಾಕ್ಷ್ಯಾಧಾರ ಸೃಷ್ಟಿಸಿದ ಆರೋಪದ ಮೇಲೆ ತೀಸ್ತಾ ಅವರನ್ನು ಜೂನ್ 26ರಂದು ಬಂಧಿಸಲಾಗಿತ್ತು. ಗಲಭೆಗೆ ಸಂಬಂಧಿಸಿದಂತೆ ನಕಲಿ ಸಾಕ್ಷ್ಯಾಧಾರವನ್ನು ಸೇಟಲ್ವಾಡ್ ಸೃಷ್ಟಿಸಿದ್ದಾರೆಂಬುದನ್ನು ಗುಜರಾತ್‍ನ ಉಗ್ರ ನಿಗ್ರಹ ಪಡೆಗೆ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಗುಜರಾತ್ ಸರಕಾರ ತಾನು ಸಲ್ಲಿಸಿದ ಅಫಿಡವಿಟ್‍ನಲ್ಲಿ ತಿಳಿಸಿದೆ.

ರಾಜಕೀಯ ಪಕ್ಷವೊಂದರ ಹಿರಿಯ ನಾಯಕರೊಬ್ಬರಿಗಾಗಿ ನಕಲಿ ಸಾಕ್ಷ್ಯಾಧಾರ ಸೃಷ್ಟಿಯ ಸಂಚಿನಲ್ಲಿ ಸೆಟಲ್ವಾಡ್ ಮತ್ತಿತರ ಆರೋಪಿಗಳು ಭಾಗಿಯಾಗಿದ್ದರೆಂಬುದಕ್ಕೆ ಸಾಕ್ಷಿಗಳ ಹೇಳಿಕೆಗಳನ್ನೂ ಗುಜರಾತ್ ಸರಕಾರ ಉಲ್ಲೇಖಿಸಿದೆ.

ಪ್ರಕರಣದ ಮುಂದಿನ ವಿಚಾರಣೆ ಮಂಗಳವಾರ ನಡೆಯಲಿದೆ.

ಇದನ್ನೂ ಓದಿ: ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News