×
Ad

ಸೆ.3ಕ್ಕೆ ನವೀಕೃತ ನಾರಾಯಣಗುರು ಸಭಾಂಗಣ ಉದ್ಘಾಟನೆ

Update: 2022-08-29 19:38 IST

ಉಡುಪಿ: ಹವಾನಿಯಂತ್ರಣ ವ್ಯವಸ್ಥೆಯೊಂದಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಂಡು ನವೀಕರಣ ಗೊಂಡಿರುವ ಬನ್ನಂಜೆಯ ನಾರಾಯಣಗುರು ಸಭಾಂಗಣ ಸೆ.3ರ ಸಂಜೆ 5ಗಂಟೆಗೆ ಲೋಕಾರ್ಪಣೆ ಗೊಳ್ಳಲಿದೆ.

ಬ್ರಹ್ಮಶ್ರೀ ನಾರಾಯಣಗುರುಗಳ ಸಂದೇಶದಂತೆ 1942ರಲ್ಲಿ ಅಸ್ತಿತ್ವಕ್ಕೆ ಬಂದ ಬಿಲ್ಲವರ ಸೇವಾ ಸಂಘ ಉಡುಪಿ, ಅಂದಿನಿಂದಲೂ ಸಮಾಜಮುಖಿ ಕಾರ್ಯ ದೊಂದಿಗೆ ಮುನ್ನಡೆಯುತಿದ್ದು, ಗುರುಗಳ ಒಂದೇ ಜಾತಿ ಒಂದೇ ಮತ ತತ್ವದಂತೆ ಸಮಾಜದ ಎಲಾ ಜಾತಿಧರ್ಮದವರ ಶುಭಕಾರ್ಯಗಳಿಗೆ ಸಭಾಂಗಣವನ್ನು ಒದಗಿಸುತ್ತಿತ್ತು. ಇದೀಗ ಆಧುನಿಕ ಅವಶ್ಯಕತೆಗನುಗುಣವಾಗಿ ಸುಮಾರು 2.5 ಕೋಟಿ ರೂ.ವೆಚ್ಚದಲ್ಲಿ ಈ ನಾರಾಯಣಗುರು ಸಭಾಂಗಣವನ್ನು ನವೀಕರಿಸಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ನವೀಕೃತ ಅಡಿಟೋರಿಯಂನ್ನು ಸೋಲೂರು ಆರ್ಯ ಈಡಿಗ ಮಹಾಸಂಸ್ಥೆದ ಪೀಠಾಧಿಪತಿ ಶ್ರೀವಿಖ್ಯಾತಾನಂದ ಸ್ವಾಮೀಜಿ ಲೋಕಾರ್ಪಣೆಗೊಳಿಸುವರು. ಮಾಜಿ ಸಚಿವ ವಿನಯಕುಮಾರ್ ಸೊರಕೆ ಸಮಾರಂಭದ ಅಧ್ಯಕ್ಷತೆ ವಹಿಸುವರು.

ರಾಜ್ಯದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ವಿ.ಸುನಿಲ್‌ಕುಮಾರ್, ಶಾಸಕ ಕೆ.ರಘುಪತಿ ಭಟ್, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ, ಬನ್ನಂಜೆ ನಗರಸಭಾ ಸದಸ್ಯೆ ಸವಿತಾ ಹರೀಶ್‌ರಾಮ್, ಬನ್ನಂಜೆ ಬಿಲ್ಲವರ ಸೇವಾ ಸಂಘ ಉಡುಪಿಯ ಅಧ್ಯಕ್ಷ ಆನಂದ ಪೂಜಾರಿ ಕಿದಿಯೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಉದ್ಘಾಟನೆಗೆ ಮುನ್ನ ಸಂಜೆ 4ರಿಂದ ಭವ್ಯಶ್ರೀ ಹರೀಶ್ ಹಾಗೂ ರಕ್ಷಾ ಹೆಗಡೆ ಬಳಗದಿಂದ ಯಕ್ಷಗಾನ ಸ್ವರಾಂಜಲಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News