×
Ad

ತಲ್ಲೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ

Update: 2022-08-29 20:12 IST

ಕುಂದಾಪುರ : ಬೈಂದೂರು ವಲಯದ ತಲ್ಲೂರು ಕೋಟೆಬಾಗಿಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಲ್ಲೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸೋಮವಾರ ನಡೆಯಿತು.

ಅಧ್ಯಕ್ಷತೆಯನ್ನು ತಲ್ಲೂರು ಗ್ರಾಪಂ ಅಧ್ಯಕ್ಷೆ ಭೀಮವ್ವ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಕೀಲರು ಹಾಗೂ ನೋಟರಿ ಕುಂದಾಪುರ ಟಿ.ಬಿ.ಶೆಟ್ಟಿ,  ತಲ್ಲೂರು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಉದಯ ಕುಮಾರ್, ಶಾಲಾ ನಾಮ ನಿರ್ದೇಶಕಿ ಚಂದ್ರಮತಿ ಹೆಗ್ಡೆ, ತಲ್ಲೂರು ಗ್ರಾಪಂ ಉಪಾಧ್ಯಕ್ಷರಾದ ಗಿರೀಶ ನಾಯ್ಕ, ಅಂಬೇಡ್ಕರ್ ಯುವಕ ಸಂಘದ ಸ್ಥಾಪಕ ಅಧ್ಯಕ್ಷ ಬೋಜರಾಜ್, ಅಂಬೇಡ್ಕರ್ ಯುವಕ ಸಂಘ ಅಧ್ಯಕ್ಷ ಅಕ್ಷಯ್, ಬಿ.ಆರ್.ಪಿ. ರಾಮಕೃಷ್ಣ ದೇವಾಡಿಗ, ಬಿ.ಆರ್.ಪಿ. ಮಂಜುನಾಥ, ಶಿಕ್ಷಣ ಸಂಯೋಜಕ ಯೋಗೀಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್, ತಲ್ಲೂರು ಸಿ.ಆರ್.ಪಿ. ನಾರಾಯಣ ಮಧ್ಯಸ್ಥ, ವಿದ್ಯಾರ್ಥಿ ನಾಯಕ ಸೃಜನ್ ದೇವಾಡಿಗ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಮೇಶ್, ಕೆ.ಕೆ.ವೈಸ್ಟಾರ್ ಅಧ್ಯಕ್ಷ ಪ್ರಶಾಂತ ಡಿ.ನಾಯ್ಕ್ ಮೊದ ಲಾದವರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ವಿಠಲ್ ಕಾಮತ್ ಸ್ವಾಗತಿಸಿದರು. ರಾಮಕೃಷ್ಣ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರತ್ನ ಹೇರ್ಳೆ ಕಾರ್ಯಕ್ರಮ ನಿರೂಪಿಸಿ ದರು. ಪ್ರಶಾಂತ್  ವಂದಿಸಿದರು. ನಂತರ ಮಕ್ಕಳ ವಿವಿಧ ಸ್ಪರ್ಧೆಗಳು ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News