ಮರಣ ಗುಂಡಿ ಮುಕ್ತಿಗಾಗಿ ಬಾಳೆಗಿಡ ನೆಟ್ಟು ಪ್ರತಿಭಟನೆ
Update: 2022-08-29 20:37 IST
ಉಡುಪಿ, ಆ.29: ನಗರದ ಕನಕದಾಸ ದಾಸ ರಸ್ತೆ, ಮತ್ತು ಮಾರುಥಿ ವೀಥಿಕಾ ಇಲ್ಲಿರುವ ಅಪಾಯಕ್ಕೆ ಆಹ್ವಾನಿಸುತ್ತಿರುವ ರಸ್ತೆ ಗುಂಡಿಗಳಲ್ಲಿ ಬಾಳೆಗಿಡ ನೆಟ್ಟು ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ಪ್ರತಿಭಟಿಸಿತು.
ಈ ಸಂದರ್ಭ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ರಾಜೇಶ್, ಭಾಸ್ಕರ್ ಉಪಸ್ಥಿತರಿ ದ್ದರು. ಅಪಾಯಯಕ್ಕೆ ಆಹ್ವಾನ ನೀಡುತ್ತಿರುವ ಮೃತ್ಯು ಕೂಪಗಳಲ್ಲಿ ಬಹಳಷ್ಟು ಜನರು ಬಿದ್ದು ಗಾಯಾಳಾಗಿರುವ ಘಟನೆಗಳು ನಡೆದಿದ್ದು, ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಅದಕ್ಕಾಗಿ ಈ ರೀತಿಯ ಪ್ರತಿಭಟನೆ ನಡೆಸಲಾಗಿದೆ ಎಂದು ನಿತ್ಯಾನಂದ ಒಳಕಾಡು ತಿಳಿಸಿದರು.