ರೈಲಿನಿಂದ ಬಿದ್ದು ಯುವಕ ಮೃತ್ಯು

Update: 2022-08-29 15:45 GMT
ಸಾಂದರ್ಭಿಕ ಚಿತ್ರ

ಗಂಗೊಳ್ಳಿ, ಆ.29: ಸೇನಾಪುರ ಗ್ರಾಮದ ರೈಲ್ವೆ ನಿಲ್ದಾಣದ ಬಳಿಯ ರೈಲ್ವೆ ಹಳಿಯಲ್ಲಿ ಸುಮಾರು 30 ರಿಂದ 35 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಆ.29ರಂದು ಬೆಳಗ್ಗೆ ಪತ್ತೆಯಾಗಿದೆ.

ಈ ವ್ಯಕ್ತಿ ಆ.28ರಂದು ರಾತ್ರಿ ಚಲಿಸುವ ರೈಲಿನಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ತಲೆಗೆ ಹಾಗೂ ಮೈಕೈಗೆ ರಕ್ತಗಾಯವಾಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News