×
Ad

ದಿಲ್ಲಿ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ನಗರ: ಅತ್ಯಾಚಾರದ ಪ್ರಕರಣದಲ್ಲಿ 40% ಹೆಚ್ಚಳ; ವರದಿ

Update: 2022-08-29 23:25 IST

ಹೊಸದಿಲ್ಲಿ: ಎನ್‌ಸಿಆರ್‌ಬಿ(NCRB)ಯ ಇತ್ತೀಚಿನ ವರದಿಯ ಪ್ರಕಾರ, ರಾಷ್ಟ್ರ ರಾಜಧಾನಿ ದಿಲ್ಲಿ(Delhi) ದೇಶದಾದ್ಯಂತ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ಮೆಟ್ರೋಪಾಲಿಟನ್ ನಗರವೆಂಬ ಹಣೆಪಟ್ಟಿ ಪಡೆದುಕೊಂಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಕಳೆದ ವರ್ಷ ಪ್ರತಿದಿನ ಇಬ್ಬರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆದಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಎನ್‌ಸಿಆರ್‌ಬಿ ವರದಿ ನೀಡಿದೆ.

ದಿಲ್ಲಿಯಲ್ಲಿ 2021 ರಲ್ಲಿ ಮಹಿಳೆಯರ ವಿರುದ್ಧದ 13,892 ಅಪರಾಧ ಪ್ರಕರಣಗಳು ದಾಖಲಾಗಿದ್ದು, 2020ಕ್ಕೆ ಹೋಲಿಸಿದರೆ ಅತ್ಯಾಚಾರದ ಪ್ರಕರಣಗಳಲ್ಲಿ 40% ಕ್ಕಿಂತ ಹೆಚ್ಚು ಹೆಚ್ಚಳವಾಗಿದೆ, 2020 ರಲ್ಲಿ ಈ ಅಂಕಿ ಅಂಶವು 9,782 ಆಗಿತ್ತು ಎಂದು ವರದಿ ಹೇಳಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಅಂಕಿಅಂಶಗಳ ಪ್ರಕಾರ, ದಿಲ್ಲಿಯಲ್ಲಿ ವರದಿಯಾಗುವ ಮಹಿಳೆಯರ ವಿರುದ್ಧದ ಅಪರಾಧಗಳ ಪ್ರಕರಣಗಳು ಎಲ್ಲಾ 19 ಮಹಾನಗರಗಳ ವಿಭಾಗದಲ್ಲಿ ಒಟ್ಟು ಅಪರಾಧಗಳ ಶೇಕಡಾ 32.20 ರಷ್ಟಿದೆ.

ದಿಲ್ಲಿಯ ನಂತರ ಆರ್ಥಿಕ ರಾಜಧಾನಿ ಮುಂಬೈ ಅಸುರಕ್ಷಿತ ನಗವೆನಿಸಿಕೊಂಡಿದ್ದು, ಮುಂಬೈಯಲ್ಲಿ 5,543 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಅದೇ ವೇಳೆ ಬೆಂಗಳೂರಿನಲ್ಲಿ(Bengaluru) 3,127 ಪ್ರಕರಣಗಳು ವರದಿಯಾಗಿವೆ. .

ಮುಂಬೈ ಮತ್ತು ಬೆಂಗಳೂರು 19 ನಗರಗಳಲ್ಲಿ ಕ್ರಮವಾಗಿ ಶೇ.12.76 ಮತ್ತು ಶೇ.7.2 ಒಟ್ಟು ಅಪರಾಧಗಳನ್ನು ಹೊಂದಿವೆ.

ಎರಡು ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಇತರ ಮೆಟ್ರೋಪಾಲಿಟನ್ ನಗರಗಳಿಗೆ ಹೋಲಿಸಿದರೆ 2021ರಲ್ಲಿ ರಾಷ್ಟ್ರೀಯ ರಾಜಧಾನಿಯು ಅಪಹರಣ (3948), ಗಂಡನಿಂದ ಕ್ರೌರ್ಯ (4674) ಮತ್ತು ಹೆಣ್ಣು ಮಕ್ಕಳ ಅತ್ಯಾಚಾರ (833) ಗೆ ಸಂಬಂಧಿಸಿದ ವಿಭಾಗಗಳಲ್ಲಿ ಮಹಿಳೆಯರ ವಿರುದ್ಧದ ಅತಿ ಹೆಚ್ಚು ಅಪರಾಧಗಳ ಪ್ರಕರಣಗಳನ್ನು ವರದಿ ಮಾಡಿದೆ. ಸರಾಸರಿಯಾಗಿ, 2021 ರಲ್ಲಿ ದಿಲ್ಲಿಯಲ್ಲಿ ಪ್ರತಿದಿನ ಎರಡು ಹುಡುಗಿಯರ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಅಂಕಿ ಅಂಶ ತೋರಿಸಿದೆ. 2021 ರಲ್ಲಿ ಎಲ್ಲಾ 19 ಮಹಾನಗರಗಳಲ್ಲಿ ಮಹಿಳೆಯರ ವಿರುದ್ಧ  43,414  ಅಪರಾಧಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ.

ದಿಲ್ಲಿಯಲ್ಲಿ 2021 ರಲ್ಲಿ 136 ವರದಕ್ಷಿಣೆ ಸಾವಿನ ಪ್ರಕರಣಗಳನ್ನು ದಾಖಲಾಗಿದೆ. ಅದೇ ವೇಳೆ ಎಲ್ಲಾ ಮೆಟ್ರೋಪಾಲಿಟನ್ ನಗರಗಳಲ್ಲಿ ಒಟ್ಟು ಮಹಿಳೆಯರ ಅಪಹರಣ (8,664) ಪ್ರಕರಣಗಳಲ್ಲಿ, 3,948 ಮಹಿಳೆಯರ ಅಪಹರಣ ಪ್ರಕರಣಗಳು ದಿಲ್ಲಿಯಿಂದ ವರದಿಯಾಗಿದೆ.  

ದಿಲ್ಲಿಯಲ್ಲಿ ಕಳೆದ ವರ್ಷ ಮಹಿಳೆಯರ ಮೇಲೆ 2,022 ಹಲ್ಲೆ ಪ್ರಕರಣಗಳು ದಾಖಲಾಗಿವೆ. 2021 ರಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ 1,357 ಪ್ರಕರಣಗಳು ವರದಿಯಾಗಿವೆ ಎಂದು NCRB ತಿಳಿಸಿದೆ. ಅಂಕಿಅಂಶಗಳ ಪ್ರಕಾರ 2021 ರಲ್ಲಿ ಮೆಟ್ರೋಪಾಲಿಟನ್ ನಗರಗಳಲ್ಲಿ ಅತಿ ಹೆಚ್ಚು ಹೆಣ್ಣು ಮಕ್ಕಳ ಅತ್ಯಾಚಾರದ( 833) ಪ್ರಕರಣಗಳು ವರದಿಯಾಗಿವೆ.

ಇದನ್ನೂ ಓದಿ: ಈಗ ದೃಢೀಕೃತ ರೈಲ್ವೆ ಟಿಕೆಟ್,ಹೋಟೆಲ್ ಬುಕಿಂಗ್ ರದ್ದು ಮಾಡಿದರೂ ಜಿಎಸ್‌ಟಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News