1992ರ ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿದ ಸುಪ್ರೀಂಕೋರ್ಟ್‌

Update: 2022-08-30 18:38 GMT

ಹೊಸದಿಲ್ಲಿ,ಆ.30: ಸರ್ವೋಚ್ಚ ನ್ಯಾಯಾಲಯವು 1992ರಲ್ಲಿ ಬಾಬ್ರಿ ಮಸೀದಿ ಧ್ವಂಸದಿಂದ ಉದ್ಭವಿಸಿದ್ದ ಎಲ್ಲ ಕಲಾಪಗಳನ್ನು ಮಂಗಳವಾರ ಮುಕ್ತಾಯಗೊಳಿಸಿದೆ.

ನ್ಯಾಯಾಂಗ ನಿಂದನೆ ಅರ್ಜಿಯನ್ನು ಮೊದಲೇ ಪಟ್ಟಿ ಮಾಡಬೇಕಿತ್ತು, ಆದರೆ ಹಿಂದು ಮತ್ತು ಮುಸ್ಲಿಮರ ನಡುವಿನ ಅಯೋಧ್ಯೆ ಭೂ ವಿವಾದವನ್ನು ಇತ್ಯರ್ಥಗೊಳಿಸಿದ 2019,ನ.9ರ ತೀರ್ಪಿನಿಂದಾಗಿ ವಿಷಯವು ಈಗ ಅಸ್ತಿತ್ವದಲ್ಲಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತು.

1991ರಲ್ಲಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದ ಅರ್ಜಿಯನ್ನು ಮತ್ತು 1992ರಲ್ಲಿ ನ್ಯಾಯಾಂಗ ನಿಂದನೆ ದೂರನ್ನು ಸಲ್ಲಿಸಿದ್ದ ಮುಹಮ್ಮದ್ ಅಸ್ಲಂ ಭುರೆ ಅವರು 2010ರಲ್ಲಿ ನಿಧನರಾಗಿದ್ದಾರೆ. ಅರ್ಜಿದಾರರ ಬದಲು ಅಮಿಕಸ್ ಕ್ಯೂರೆಯನ್ನು ನೇಮಕಗೊಳಿಸುವಂತೆ ವಕೀಲ ಎಂ.ಎಂ.ಕಶ್ಯಪ ಸಲ್ಲಿಸಿದ್ದ ಅರ್ಜಿಯನ್ನೂ ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿತು.

1992ರಲ್ಲಿ ಬಾಬ್ರಿ ಮಸೀದಿ ಧ್ವಂಸವು ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ನಡೆದಿತ್ತು ಎಂದೂ ಹೇಳಿದ ಸುಪ್ರೀಂ ಕೋರ್ಟ್,1949ರಲ್ಲಿ ವಿಗ್ರಹಗಳನ್ನಿರಿಸಿ ಮಸೀದಿಯನ್ನು ಅಪವಿತ್ರಗೊಳಿಸಿದ್ದು ಮತ್ತು ಅದನ್ನು ಧ್ವಂಸಗೊಳಿಸಿದ್ದು ಕಾನೂನಿಗೆ ವಿರುದ್ಧವಾಗಿತ್ತು ಎಂದು ಅಭಿಪ್ರಾಯಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News