×
Ad

ಹೂಡೆ: ಕ್ಷುಲ್ಲಕ ವಿಚಾರಕ್ಕೆ ಜಗಳ, ಮಸೀದಿಯ ಅಧ್ಯಕ್ಷರಿಗೆ ಹಲ್ಲೆ

Update: 2022-08-30 22:20 IST
ಸಾಂದರ್ಭಿಕ ಚಿತ್ರ

ಮಲ್ಪೆ, ಆ. 30: ಕ್ಷುಲ್ಲಕ ವಿಚಾರದಲ್ಲಿ ಮಸೀದಿಯ ಅಧ್ಯಕ್ಷರಿಗೆ ಹಲ್ಲೆ ನಡೆಸಿರುವ ಘಟನೆ ಹೂಡೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಹೂಡೆಯ ಮುಆವಿಯಾ ಮಸೀದಿಯ ಅಧ್ಯಕ್ಷ ಕುದುರ್ ಸೈಪುಲ್ಲಾ ಎಂಬವರು ಹಲ್ಲೆಗೊಳಗಾಗಿದ್ದು, ಹೂಡೆಯ ನಿವಾಸಿ ಪೈಝಲ್ ಸುಲೈಮಾನ್ ಹಾಗೂ ಅವರ ಅಣ್ಣ ಫಾರೂಕ್ ಸುಲೈಮಾನ್ ಆರೋಪಿಗಳೆಂದು ದೂರಲಾಗಿದೆ.

ಮುಆವಿಯಾ ಮಸೀದಿಯ ಬಳಿ ಖಾಸಗಿ ಜಾಗದಲ್ಲಿ ಫೈಝಲ್ ಶೆಡ್ ಕಟ್ಟಿಕೊಂಡು ಸಣ್ಣ ಮಕ್ಕಳಿಗೆ ಕುರ್‌ಆನ್ ಬೋಧನೆ  ಮಾಡುತ್ತಿದ್ದರು. ಅಲ್ಲದೆ ಮುಆವಿಯಾ ಮಸೀದಿಯಲ್ಲಿ ಅಧ್ಯಕ್ಷರ ಅನುಮತಿ ಇಲ್ಲದೆ 10-15 ವರ್ಷದ ಕೆಳಗಿನ ಮಕ್ಕಳಿಗೆ ಕುರ್‌ಆನ್ ಕಲಿಸಲು ಪ್ರಾರಂಭಿಸಿದ್ದರು ಎಂದು ತಕರಾರು ಸೃಷ್ಟಿಯಾಗಿತ್ತು ಎಂದು ಹೇಳಲಾಗಿದೆ.

ಕುದುರ್ ಸೈಪುಲ್ಲಾ ಹಾಗು ಫೈಝಲ್ ನಡುವೆ ಈ ವಿಚಾರವಾಗಿ ಮಧ್ಯೆ ಮಾತುಕತೆ ಆಗಿತ್ತು. ಇಂದು ಬೆಳಗ್ಗೆ 5:30ಕ್ಕೆ ಮಸೀದಿಯ ಪ್ರಾರ್ಥನೆ ಮುಗಿದ ಬಳಿಕ ಪೈಝಲ್ ಸುಲೈಮಾನ್ ಮತ್ತು ಫಾರೂಕ್ ಸುಲೈಮಾನ್ ಅವರು ಬಂದು ಸೈಪುಲ್ಲಾ ಅವರಲ್ಲಿ ವಾಗ್ವಾದಕ್ಕಿಳಿದು ಮಸೀದಿಯ ಗೇಟ್ ಬಳಿ ಅವರನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಕೈಯಿಂದ ಕೆನ್ನೆಗೆ ಹೊಡೆದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News