ಚತುಷ್ಪಥ ಹೆದ್ದಾರಿಯ ಅವೈಜ್ಞಾನಿಕ ನಿರ್ಮಾಣ ಆರೋಪ; ಸೆ.10ರಂದು ತೂಮಿನಾಡಿನಿಂದ ಹತ್ತನೇಮೈಲ್ ವರೆಗೆ ಬೃಹತ್ ರಾಲಿ

Update: 2022-08-31 04:26 GMT

ಮಂಜೇಶ್ವರ: ತಲಪಾಡಿ -ಚೆಂಗಳ ಚತುಷ್ಪಥ ಹೆದ್ದಾರಿಯ ಅವೈಜ್ಞಾನಿಕ ನಿರ್ಮಾಣದ ವಿರುದ್ಧ ಹೋರಾಟ ಸಮಿತಿಯ ನೇತೃತ್ವದಲ್ಲಿ ಸೆ.10ರಂದು ನಡೆಯಲಿರುವ ಹೋರಾಟವನ್ನು ಯಶಸ್ವಿಗೊಳಿಸಲು ತೀರ್ಮಾನಿಸಲಾಗಿದೆ.

ಸೆ.10 ರಂದು ತೂಮಿನಾಡಿನಿಂದ ಹತ್ತನೇಮೈಲ್ ವರೆಗೆ  ಬೃಹತ್ ರಾಲಿ ಹಾಗೂ ಸೆ.11 ರಿಂದ ಅನಿರ್ಧಿಷ್ಟಾವಧಿ  ಧರಣಿ ಸತಾಗ್ರಹ ನಡೆಸಲು ತೀರ್ಮಾನಿಸಲಾಯಿತು. ಸ್ಥಳೀಯ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮುಚ್ಚಿ ಮುಷ್ಕರಕ್ಕೆ ಬೆಂಬಲ ಸೂಚಿಸಲಿದ್ದಾರೆ.

ಅಗತ್ಯ ಬಿದ್ದರೆ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಲು ಸಿದ್ಧ ಎಂದು ಹೋರಾಟ ಸಮಿತಿ ತಿಳಿಸಿದೆ. ಶಾಸಕ ಎ.ಕೆ.ಎಂ.ಅಶ್ರಫ್  ಸೇರಿದಂತೆ ಜನಪ್ರತಿನಿಧಿಗಳು ಪಾಲ್ಗೊಳ್ಳುವರು.

ಸಭೆಯಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಯು.ಕೆ. ಸೈಫುಲ್ಲಾ  ತಂಙಳ್ ಅಧ್ಯಕ್ಷತೆ ವಹಿಸಿದ್ದರು, ಸಂಜೀವ ಶೆಟ್ಟಿ, ರಹೀಂ ಹತ್ತನೇ ಮೈಲ್, ಕೃಷ್ಟ ಕಣ್ವ ತೀರ್ಥ, ರಝಾಕ್ ಚಕ್ಕೂರು, ಬಶೀರ್ ಕನಿಲ, ಹನೀಫ್ ಕುಚ್ಚಿಕ್ಕಾಡ್, ಅಶ್ರಫ್ ಬಡಾಜೆ, ಎಂ.ಕೆ.ಮಜೀದ್, ಅಬೂಬಕ್ಕರ್ ಕುಂಜತ್ತೂರ್, ಎಸ್.ಎಂ.ಬಶೀರ್, ಯು.ಎ. ಖಾದರ್ ಮೊದಲಾದವರು ಉಪಸ್ಥಿತರಿದ್ದರು.

ಕುಂಞಿಮೋನು ಸ್ವಾಗತಿಸಿ, ಜಬ್ಬಾರ್ ಪದವ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News