ಜ್ಞಾನವಾಪಿ ʼರಾಷ್ಟ್ರೀಯ ಪ್ರಾಮುಖ್ಯತೆಯʼ ಪ್ರಕರಣ: 10 ದಿನಗಳಲ್ಲಿ ಅಫಿಡವಿಟ್‌ ಸಲ್ಲಿಸುವಂತೆ ಹೈಕೋರ್ಟ್‌ ಆದೇಶ

Update: 2022-08-31 14:45 GMT

ಹೊಸದಿಲ್ಲಿ: ಅಲಹಾಬಾದ್ ಹೈಕೋರ್ಟ್(Alahabad Highcourt) ಮಂಗಳವಾರ ಜ್ಞಾನವಾಪಿ ಮಸೀದಿ(Gyanavapi Mosque) ಪ್ರಕರಣವು "ರಾಷ್ಟ್ರೀಯ ಪ್ರಾಮುಖ್ಯತೆ"ಯ(National Intrest) ವಿಚಾರ ಎಂದು ಹೇಳಿದೆ ಮತ್ತು 10 ದಿನಗಳಲ್ಲಿ ಈ ವಿಷಯದ ಬಗ್ಗೆ ತಮ್ಮ ಅಫಿಡವಿಟ್‌ಗಳನ್ನು(Affidavit) ಸಲ್ಲಿಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶ ನೀಡಿದೆ ಎಂದು BarandBench ವರದಿ ಮಾಡಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ರಾಜ್ಯ ಸರ್ಕಾರವು ಸಲ್ಲಿಸಿದ ಹಿಂದಿನ ಅಫಿಡವಿಟ್‌ಗಳು "ಅಪೂರ್ಣವಾಗಿದೆ" ಎಂದು ನ್ಯಾಯಮೂರ್ತಿ ಪ್ರಕಾಶ್ ಪರ್ಡಿಯಾ ಹೇಳಿದರು.

"ಅರ್ಜಿಯ ಬಹುತೇಕ ಎಲ್ಲಾ ಪ್ಯಾರಾಗಳಿಗೆ 'ವಿವರಣೆ ಅಗತ್ಯವಿಲ್ಲ' ಎಂದು ಉತ್ತರಿಸಲಾಗಿದೆ" ಎಂದು ಆದೇಶವು ರಾಜ್ಯ ಸರ್ಕಾರದ ಅಫಿಡವಿಟ್ ಬಗ್ಗೆ ಹೇಳಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣೆಯ(Archaeological Survey of India) ಹಿಂದಿನ ಅಫಿಡವಿಟ್‌ಗೆ ಸಂಬಂಧಿಸಿದಂತೆ ನ್ಯಾಯಾಲಯವು ಹೀಗೆ ಹೇಳಿದೆ: “ಮೇಲೆ ಹೇಳಿದ ಪ್ರತಿ ಅಫಿಡವಿಟ್ ಕೂಡ ತುಂಬಾ ಅಪೂರ್ಣ ಮತ್ತು ಗೊಂದಲಮಯವಾಗಿದೆ. ಎರಡೂವರೆ ಪುಟಗಳಲ್ಲಿ ಇದು ಮುಗಿಯುತ್ತದೆ. ಈ ವಿಷಯವು ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಹೊಂದಿರುವುದರಿಂದ, , ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಹಾನಿರ್ದೇಶಕರು ಈ ವಿಷಯದಲ್ಲಿ ತಮ್ಮ ವೈಯಕ್ತಿಕ ಅಫಿಡವಿಟ್ ಅನ್ನು ಅದೇ ಅವಧಿಯಲ್ಲಿ, ಅಂದರೆ 10 ದಿನಗಳಲ್ಲಿ ಸಲ್ಲಿಸುವಂತೆ" ನಿರ್ದೇಶಿಸಲಾಗಿದೆ.

ಏಕ-ನ್ಯಾಯಾಧೀಶರು ತನ್ನ ಮಧ್ಯಂತರ ಆದೇಶವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಿದರು. ಇದರ ಮೂಲಕ ವಾರಣಾಸಿ ನ್ಯಾಯಾಲಯದ ಮುಂದೆ ವಿಚಾರಣೆಯನ್ನು ಹೈಕೋರ್ಟ್ ತಡೆಯಿತು ಮತ್ತು ಜ್ಞಾನವಾಪಿ ಮಸೀದಿಯ ಪುರಾತತ್ತ್ವ ಶಾಸ್ತ್ರದ ಸಮೀಕ್ಷೆಗೆ ಅವಕಾಶ ನೀಡಿತು.

ಹೈಕೋರ್ಟ್ ಈ ಪ್ರಕರಣವನ್ನು ಸೆಪ್ಟೆಂಬರ್ 12ಕ್ಕೆ ವಿಚಾರಣೆಗೆ ಮುಂದೂಡಿದೆ.

ಪ್ರಸ್ತುತ ಅರ್ಜಿಯು ಮತ್ತೊಂದು ಮನವಿಗಿಂತ ಭಿನ್ನವಾಗಿದೆ. ಮೊದಲ ಮನವಿಯಲ್ಲಿ ಐವರು ಮಹಿಳೆಯರು ಹಿಂದೂ ದೇವತೆ ಶೃಂಗಾರ್ ಗೌರಿಯ ಚಿತ್ರವು ಮಸೀದಿಯಲ್ಲಿ ಅಸ್ತಿತ್ವದಲ್ಲಿದೆ ಎಂದು ಪ್ರತಿಪಾದಿಸಿದ್ದರು ಮತ್ತು ಅಲ್ಲಿ ದೈನಂದಿನ ಪ್ರಾರ್ಥನೆ ಸಲ್ಲಿಸಲು ಅನುಮತಿ ಕೋರಿದ್ದರು.

ಪ್ರಸ್ತುತ ಪ್ರಕರಣವು ವಿಎಸ್ ರಸ್ತೋಗಿ ಅವರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದೆ. ಅವರು ಮೊಘಲ್ ಚಕ್ರವರ್ತಿ ಔರಂಗಜೇಬ್ 1664 ರಲ್ಲಿ ಮಸೀದಿಯನ್ನು ನಿರ್ಮಿಸಲು 2,000 ವರ್ಷಗಳಷ್ಟು ಹಳೆಯದಾದ ಕಾಶಿ ವಿಶ್ವನಾಥ ದೇವಾಲಯದ ಒಂದು ಭಾಗವನ್ನು ಕೆಡವಿದರು ಎಂದು ಪ್ರತಿಪಾದಿಸಿದ್ದಾರೆ.

ಜ್ಞಾನವಾಪಿ ಮಸೀದಿ ನಿರ್ಮಿಸಿರುವ ಜಾಗವನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು ಎಂದು ರಸ್ತೋಗಿ ಆಗ್ರಹಿಸಿದರು. ಅವರು ಡಿಸೆಂಬರ್ 2019 ರಲ್ಲಿ ದೇವಾಲಯದ ಮುಖ್ಯ ದೇವರಾದ ವಿಶ್ವೇಶ್ವರನ ಪರವಾಗಿ ಅರ್ಜಿಯನ್ನು ಸಲ್ಲಿಸಿದರು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಮೀಕ್ಷೆಯನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದರು.

ಜನವರಿ 2021 ರಲ್ಲಿ, ಅಂಜುಮನ್ ಇಂತೇಝಾಮಿಯಾ ಮಸೀದಿ ಸಮಿತಿ, ಮಸೀದಿಯ ಉಸ್ತುವಾರಿ, ರಸ್ತೋಗಿ ಅವರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News