ಕೆನಡ: ಒಂದೂವರೆ ವರ್ಷದ ಮಗುವಿನ ಸಾವಿನ ಪ್ರಕರಣ, ಮೂವರು ಪೊಲೀಸ್ ಅಧಿಕಾರಿಗಳ ಮೇಲೆ ನರಹತ್ಯೆ ಆರೋಪ

Update: 2022-09-01 02:30 GMT
Photo:twitter

ಮಾಂಟ್ರಿಯಲ್: 2020 ರಲ್ಲಿ ಒಂಟಾರಿಯೊದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಂದೂವರೆ ವರ್ಷದ ಮಗುವಿನ ಸಾವಿನ ಪ್ರಕರಣದ ಕುರಿತಂತೆ ಕೆನಡಾದ ಮೂವರು ಪೊಲೀಸ್ ಅಧಿಕಾರಿಗಳ ಮೇಲೆ ನರಹತ್ಯೆಯ ಆರೋಪ ಹೊರಿಸಲಾಗಿದೆ (Three Canadian police officers have been charged with manslaughter over the death of a one-and-a-half-year-old) ಎಂದು ಸರಕಾರ ಬುಧವಾರ ಪ್ರಕಟಿಸಿದೆ.

ನವೆಂಬರ್ 26, 2020 ರಂದು ಟೊರೊಂಟೊದಿಂದ ಉತ್ತರಕ್ಕೆ 100 ಕಿಲೋಮೀಟರ್ (60 ಮೈಲಿ) ದೂರದಲ್ಲಿರುವ ಕವರ್ತಾ ಲೇಕ್ಸ್‌ನಲ್ಲಿ ಜೇಮ್ಸನ್ ಶಪಿರೋ ಎಂಬ ಮಗುವಿನ ತಂದೆ ಹಾಗೂ  ಪೊಲೀಸರ ನಡುವಿನ ಗುಂಡಿನ ಚಕಮಕಿಯಲ್ಲಿ ಮಗು ಶಪಿರೋ ಸಾವನ್ನಪ್ಪಿದ್ದರು. ಶಪಿರೋ ತನ್ನ ತಂದೆಯ ಪಿಕಪ್ ಟ್ರಕ್‌ನಲ್ಲಿದ್ದಾಗ  ಗುಂಡು ತಗಲಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಈ ಪ್ರಕರಣವು ಕೆನಡದಲ್ಲಿ ಭಾರೀ ಸುದ್ದಿ ಮಾಡಿತ್ತು. ಕೆನಡದಲ್ಲಿ ಬಂದೂಕು-ಸಂಬಂಧಿತ ಘಟನೆಗಳು ಎಲ್ಲಾ ಹಿಂಸಾತ್ಮಕ ಅಪರಾಧಗಳಲ್ಲಿ ಮೂರು ಪ್ರತಿಶತಕ್ಕಿಂತ ಕಡಿಮೆಯಿವೆ.

"ವಿಶೇಷ ತನಿಖಾ ಘಟಕದ (SIU) ನಿರ್ದೇಶಕ ಜೋಸೆಫ್ ಮಾರ್ಟಿನೊ ಅವರು 18 ತಿಂಗಳ ವಯಸ್ಸಿನ ಜೇಮ್ಸನ್ ಶಪಿರೋ ಅವರ ಸಾವಿಗೆ ಸಂಬಂಧಿಸಿದಂತೆ ಮೂವರು ಒಂಟಾರಿಯೊ ಪ್ರಾಂತೀಯ ಪೊಲೀಸ್ (OPP) ಅಧಿಕಾರಿಗಳು ಕ್ರಿಮಿನಲ್ ಅಪರಾಧಗಳನ್ನು ಮಾಡಿದ್ದಾರೆ ಎಂದು ನಂಬಲು ಸಮಂಜಸವಾದ ಆಧಾರಗಳಿವೆ" ಎಂದು ಸ್ವತಂತ್ರ ಫೆಡರಲ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News