ಏಶ್ಯಕಪ್: ಟ್ವೆಂಟಿ-20 ಇತಿಹಾಸದಲ್ಲಿ ಈ ಮೈಲಿಗಲ್ಲು ತಲುಪಿದ ಮೊದಲ ಆಟಗಾರ ರೋಹಿತ್ ಶರ್ಮಾ
ದುಬೈ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಬುಧವಾರ ಟ್ವೆಂಟಿ-20 ಇತಿಹಾಸದಲ್ಲಿ 3,500 ರನ್ ಮೈಲುಗಲ್ಲು ತಲುಪಿದ ಮೊದಲ ಆಟಗಾರ (Rohit Sharma becomes first player to score 3500 runs in T20I matches)ಎನಿಸಿಕೊಂಡಿದ್ದಾರೆ.
ಯುಎಇನಲ್ಲಿ ನಡೆಯುತ್ತಿರುವ ಏಶ್ಯ ಕಪ್ 2022 ರಲ್ಲಿ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ ಈ ಹೆಗ್ಗುರುತನ್ನು ತಲುಪಿದರು.
ಪಂದ್ಯದ ಮೊದಲ ಓವರ್‌ನಲ್ಲಿ ಹರೂನ್ ಅರ್ಷದ್ ವಿರುದ್ಧ ರನ್ ಗಳಿಸಿದ ರೋಹಿತ್ ಈ ಸಾಧನೆ ಮಾಡಿದರು. ಪಂದ್ಯ ಆರಂಭಕ್ಕೂ ಮುನ್ನ 3, 499 ರನ್ ಗಳಿಸಿದ್ದ ರೋಹಿತ್ 3, 500 ರನ್ ತಲುಪಿದ್ದರು.
ನ್ಯೂಝಿಲೆಂಡ್‌ನ ಆರಂಭಿಕ ಬ್ಯಾಟರ್ ಮಾರ್ಟಿನ್ ಗಪ್ಟಿಲ್ 3,497 ರನ್ ಗಳಿಸಿ ಗರಿಷ್ಠ ಟ್ವೆಂಟಿ-20 ರನ್ ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು, ವಿರಾಟ್ ಕೊಹ್ಲಿ 3,402 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.
ಭಾರತದ ನಾಯಕ ಈಗ ಚುಟುಕು ಮಾದರಿಯ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ.
34 ವರ್ಷ ವಯಸ್ಸಿನ ರೋಹಿರತ್ ಅವರು 2008 ರಿಂದ ಎಲ್ಲಾ ಏಶ್ಯ ಕಪ್ ಆವೃತ್ತಿಗಳಲ್ಲಿ ಕಾಣಿಸಿಕೊಂಡಿದ್ದಾರೆ, ಪಂದ್ಯಾವಳಿಯ ಏಳು ಸರಣಿಗಳಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯರಾಗಿದ್ದಾರೆ.
ಏಶ್ಯಕಪ್‌ನಲ್ಲಿ ರೋಹಿತ್ 27 ಇನ್ನಿಂಗ್ಸ್‌ಗಳಲ್ಲಿ 40.68 ಸರಾಸರಿಯಲ್ಲಿ 895 ರನ್‌ಗಳನ್ನು ಸಿಡಿಸಿದ್ದಾರೆ.