×
Ad

ಭಾರತ ವಿರುದ್ಧ ಏಶ್ಯಕಪ್ ಪಂದ್ಯದ ನಂತರ ಗೆಳತಿಗೆ ಪ್ರಪೋಸ್ ಮಾಡಿದ ಹಾಂಕಾಂಗ್ ಕ್ರಿಕೆಟಿಗ: ವೀಡಿಯೊ ವೈರಲ್

Update: 2022-09-01 12:22 IST
Photo:twitter

ದುಬೈ: ಏಶ್ಯಕಪ್‌ನಲ್ಲಿ ಬುಧವಾರ ಭಾರತ ವಿರುದ್ಧ 40 ರನ್‌ಗಳಿಂದ ಸೋತರೂ ಹಾಂಕಾಂಗ್ ಉತ್ಸಾಹಭರಿತ ಪ್ರದರ್ಶನ ನೀಡಿತು. ಫಲಿತಾಂಶವು ನಿರಾಶಾದಾಯಕವಾಗಿದ್ದರೂ, ಹಾಂಕಾಂಗ್ ಬ್ಯಾಟರ್ ಕಿಂಚಿತ್ ಶಾ ಪಂದ್ಯದ ನಂತರ ತನ್ನ ಗೆಳತಿಯನ್ನು ಅಚ್ಚರಿಗೊಳಿಸಲು ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಸ್ಟ್ಯಾಂಡ್‌ಗೆ ಹೋದರು.  ಮೊಣಕಾಲನ್ನು ಊರಿ ಪ್ರಪೋಸ್ ಮಾಡಿದ್ದಾರೆ.  

ಈ ಪ್ರಪೋಸ್ ನಿಂದ  ಸಂಪೂರ್ಣವಾಗಿ ದಿಗ್ಭ್ರಮೆಗೊಂಡ ಯುವತಿ"ನಾನು ಇದನ್ನು ನಂಬಲು ಸಾಧ್ಯವಿಲ್ಲ" ಎಂದು ಪದೇ ಪದೇ ಹೇಳುವುದು ಕೇಳಿಸಿದೆ.

ಈ ಜೋಡಿ ಪರಸ್ಪರ ಅಪ್ಪಿಕೊಳ್ಳುವ ಮೊದಲು ಕಿಂಚಿತ್ ತನ್ನ ಗೆಳತಿಗೆ ಉಂಗುರ ತೊಡಿಸಿದರು.

ಕಿಂಚಿತ್ ಅವರ ಪ್ರೊಪೋಸ್  ವೀಡಿಯೊ ಹಾಗೂ  ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಹೃದಯಸ್ಪರ್ಶಿ ಕ್ಷಣವನ್ನು ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News