×
Ad

ಉದ್ಧವ್ ಠಾಕ್ರೆ ಆಪ್ತ ಕಾರ್ಯದರ್ಶಿ ಮಿಲಿಂದ್ ನಾರ್ವೇಕರ್ ರನ್ನು ಭೇಟಿಯಾದ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ

Update: 2022-09-02 08:07 IST
Photo: PTI

ಮುಂಬೈ: ಗಣೇಶ ಹಬ್ಬದ ನಿಮಿತ್ತ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ(Maharashtra Chief Minister Eknath Shinde) ಗುರುವಾರ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ (Shiv Sena chief Uddhav Thackeray )ಅವರ ಆಪ್ತ ಕಾರ್ಯದರ್ಶಿ ಮಿಲಿಂದ್ ನಾರ್ವೇಕರ್ ಅವರ ನಿವಾಸಕ್ಕೆ ಭೇಟಿ ನೀಡಿದರು.

ಜೂನ್‌ನಲ್ಲಿ ಠಾಕ್ರೆಯವರ ನಾಯಕತ್ವದ ವಿರುದ್ಧ ಬಂಡಾಯವೆದ್ದು ಅವರ ಸರಕಾರವನ್ನು ಉರುಳಿಸಿದ ಏಕನಾಥ್ ಶಿಂಧೆ ಅವರು ನಾರ್ವೇಕರ್ ಅವರ ನಿವಾಸಕ್ಕೆ ಗಣೇಶನಿಗೆ ನಮನ ಸಲ್ಲಿಸಲು ಭೇಟಿ ನೀಡಿದ್ದರು ಎಂದು ಹೇಳಿದರು.

ಆದರೆ ನಾರ್ವೇಕರ್ ಅವರು ಉದ್ಧವ್ ಠಾಕ್ರೆಯವರ ನಿಕಟ ವಿಶ್ವಾಸಿ ಎಂದು ಪರಿಗಣಿಸಲ್ಪಟ್ಟಿರುವುದರಿಂದ ಈ ಭೇಟಿಯು ಮಹತ್ವವನ್ನು ಪಡೆದುಕೊಂಡಿದೆ.

ಏಕನಾಥ್ ಶಿಂಧೆ ಅವರನ್ನು ಬೆಂಬಲಿಸುವ ಬಂಡಾಯ ಶಾಸಕರು ಜೂನ್‌ನಲ್ಲಿ ಸೂರತ್‌ಗೆ ಹೋದಾಗ ನಾರ್ವೇಕರ್ ಶಾಸಕರೊಂದಿಗೆ ಮಾತುಕತೆ ನಡೆಸಲು ಅಲ್ಲಿಗೆ ಪ್ರಯಾಣಿಸಿದ್ದರು.

ಏಕನಾಥ್ ಶಿಂಧೆ ಅಂತಿಮವಾಗಿ ಮಹಾರಾಷ್ಟ್ರದಲ್ಲಿ ಠಾಕ್ರೆ ನೇತೃತ್ವದ ಸೇನಾ-ಎನ್‌ಸಿಪಿ-ಕಾಂಗ್ರೆಸ್ ಮಹಾ ವಿಕಾಸ್ ಅಘಾಡಿ ಸರಕಾರವನ್ನು ಉರುಳಿಸಿದ್ದರು. ಈಗ ಅವರು ಮತ್ತು ಉದ್ಧವ್ ಠಾಕ್ರೆ ಅವರಿಂದ  ಶಿವಸೇನೆಯ ನಾಯಕತ್ವವನ್ನು ಪಡೆಯಲು ಕಾನೂನು ಹೋರಾಟ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News