ಉತ್ತರಪ್ರದೇಶ: ಗಂಗಾನದಿಯಲ್ಲಿ ದೋಣಿ ದುರಂತ, ಒಟ್ಟು ಸಾವಿನ ಸಂಖ್ಯೆ ಏಳಕ್ಕೇರಿಕೆ
ಗಾಝಿಪುರ (ಉ.ಪ್ರ.): ಗಂಗಾ ನದಿಯಿಂದ ಇನ್ನೂ ಐದು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಬುಧವಾರ ಉತ್ತರಪ್ರದೇಶದ ಗಂಗಾನದಿಯಲ್ಲಿ ನಡೆದ ದೋಣಿ ದುರಂತದಲ್ಲಿ(boat tragedy) ಒಟ್ಟು ಸಾವಿನ ಸಂಖ್ಯೆ ಏಳಕ್ಕೆ ಏರಿದೆ.
ಬುಧವಾರ ಸಂಜೆ ವಾರದ ಮಾರುಕಟ್ಟೆಯಿಂದ ದೋಣಿಯಲ್ಲಿ ಹಿಂದಿರುಗುತ್ತಿದ್ದ 24 ಜನರಲ್ಲಿ ಹದಿನೇಳು ಜನರನ್ನು ರಕ್ಷಿಸಲಾಗಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಇಬ್ಬರ ಶವಗಳನ್ನು ರೆಯೋತಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆ ಹಚ್ಚಲಾಗಿದೆ.
ಸಂಧ್ಯಾ ಕುಮಾರ್ (6), ಅನಿತಾ ಪಾಸ್ವಾನ್ (10), ಅಲಿಸಾ ಯಾದವ್ (5), ಖುಶಾಲ್ ಯಾದವ್ (10) ಮತ್ತು ಸತ್ಯಂ (12) ಮೃತದೇಹಗಳನ್ನು ಗುರುವಾರ ನದಿಯಿಂದ ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಸಂಜೆ, ಮುಳುಗು ತಜ್ಞರು ನಗೀನಾ ಪಾಸ್ವಾನ್ (70) ಮತ್ತು ವಿಷಂಭರ್ ಗೌರ್ ಅವರ ಮೃತದೇಹಗಳನ್ನು ಹೊರತೆಗೆದಿದ್ದರು.
ಮೃತರ ಸಂಬಂಧಿಕರಿಗೆ ವಿಪತ್ತು ಪರಿಹಾರ ನಿಧಿಯಿಂದ ಆರ್ಥಿಕ ನೆರವು ನೀಡುವುದಾಗಿ ಗಾಝಿಪುರ ಜಿಲ್ಲಾಡಳಿತ ಭರವಸೆ ನೀಡಿದೆ.