×
Ad

ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ INS ವಿಕ್ರಾಂತ್ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

Update: 2022-09-02 10:56 IST
Photo:ANI

ಹೊಸದಿಲ್ಲಿ: ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್  (INS Vikrant, India's First Home-Built Aircraft Carrier)ಅನ್ನು ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ( Prime Minister Narendra Modi )ಅವರು  ಇಂದು ಲೋಕಾರ್ಪಣೆ ಮಾಡಿದ್ದಾರೆ. ಇದರೊಂದಿಗೆ INS ವಿಕ್ರಾಂತ್ ವಿಧ್ಯುಕ್ತವಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿತು.

ಈ ಸಂದರ್ಭದಲ್ಲಿ ಕೊಚ್ಚಿಯಲ್ಲಿ ನೂತನ ನೌಕಾ ಧ್ವಜವನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದರು.

ಶುಕ್ರವಾರ ಔಪಚಾರಿಕವಾಗಿ ಕಾರ್ಯಾರಂಭ ಮಾಡಿರುವ  45,000 ಟನ್‌ ತೂಕದ ವಿಕ್ರಾಂತ್ ಅನ್ನು 20,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

262 ಮೀಟರ್ ಉದ್ದ ಹಾಗೂ  62 ಮೀಟರ್ ಅಗಲದ ಐಎನ್‌ಎಸ್ ವಿಕ್ರಾಂತ್ ಭಾರತದಲ್ಲಿ ನಿರ್ಮಿಸಲಾದ ಅತಿದೊಡ್ಡ ಯುದ್ಧನೌಕೆಯಾಗಿದೆ. ಇದು MiG-29K ಫೈಟರ್ ಜೆಟ್‌ಗಳು ಹಾಗೂ  ಹೆಲಿಕಾಪ್ಟರ್‌ಗಳನ್ನು ಒಳಗೊಂಡಂತೆ 30 ವಿಮಾನಗಳನ್ನು ಹೊಂದಬಹುದು. ಯುದ್ಧನೌಕೆಯು ಸುಮಾರು 1,600 ಸಿಬ್ಬಂದಿಗೆ ಅವಕಾಶ ಕಲ್ಪಿಸುತ್ತದೆ.

ಒಂದು ದಶಕದಿಂದ ಯುದ್ಧನೌಕೆ ನಿರ್ಮಾಣ ಕಾರ್ಯ ನಡೆದಿದ್ದು, ಕಳೆದ ವರ್ಷ ಆಗಸ್ಟ್ 21 ರಿಂದ ಐಎನ್‌ಎಸ್ ವಿಕ್ರಾಂತ್‌ನ ಸಮುದ್ರ ಪ್ರಯೋಗಗಳ ಬಹು ಹಂತಗಳು ಪೂರ್ಣಗೊಂಡಿವೆ.

ಐಎನ್‌ಎಸ್ ವಿಕ್ರಾಂತ್ ಪ್ರತಿಯೊಬ್ಬ ಭಾರತೀಯನ ಹೆಮ್ಮೆ: ಪ್ರಧಾನಿ ಮೋದಿ

"ದೇಶೀಯ ತಂತ್ರಜ್ಞಾನದೊಂದಿಗೆ ಬೃಹತ್ ವಿಮಾನವಾಹಕ ನೌಕೆಯನ್ನು ತಯಾರಿಸುವ ವಿಶ್ವದ ದೇಶಗಳೊಂದಿಗೆ ಭಾರತ ಇಂದು  ಸೇರಿಕೊಂಡಿದೆ. ಇಂದು ಐಎನ್‌ಎಸ್ ವಿಕ್ರಾಂತ್ ದೇಶದಲ್ಲಿ ಹೊಸ ಆತ್ಮವಿಶ್ವಾಸವನ್ನು ತುಂಬಿದೆ.  ದೇಶದಲ್ಲಿ ಹೊಸ ಆತ್ಮವಿಶ್ವಾಸವನ್ನು ಮೂಡಿಸಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅನುಪಮವಾದ ಅಮೃತ ವಿಕ್ರಾಂತ. ವಿಕ್ರಾಂತ್ ಭಾರತ ಸ್ವಾವಲಂಬಿಯಾಗುವುದರ ವಿಶಿಷ್ಟ ಪ್ರತಿಬಿಂಬವಾಗಿದೆ’’ಎಂದು ಪ್ರಧಾನಿ ಮೋದಿ ಹೇಳಿದರು.

"ಐಎನ್‌ಎಸ್ ವಿಕ್ರಾಂತ್ ಪ್ರತಿಯೊಬ್ಬ ಭಾರತೀಯನ ಹೆಮ್ಮೆ. ಸವಾಲುಗಳು ದೊಡ್ಡದಾಗಿದ್ದರೆ, ಅಡೆತಡೆಗಳು ಹಲವಿರುತ್ತದೆ. ಆಗ ಉತ್ತರ ಐಎನ್‌ಎಸ್ ವಿಕ್ರಾಂತ್. ಕೇರಳದ ಕಡಲತೀರದಿಂದ, ಪ್ರತಿಯೊಬ್ಬ ಭಾರತೀಯನೂ ಇಂದು ಹೊಸ ಭವಿಷ್ಯದ ಸೂರ್ಯೋದಯಕ್ಕೆ ಸಾಕ್ಷಿಯಾಗುತ್ತಿದ್ದಾರೆ. INS ವಿಕ್ರಾಂತ್‌ನಲ್ಲಿನ ಈ ಸಮಾರಂಭವು ಜಾಗತಿಕ ದಿಗಂತದಲ್ಲಿ ಭಾರತದ ನೈತಿಕತೆಯನ್ನು ಬಲಪಡಿಸುವ ಕರೆಯಾಗಿದೆ" ಎಂದು ಪ್ರಧಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News