×
Ad

ಪದ್ಮಶ್ರೀ ಕಮಲಾ ಪೂಜಾರಿಗೆ ಆಸ್ಪತ್ರೆಯಲ್ಲಿ ನೃತ್ಯ ಮಾಡಲು ಒತ್ತಾಯ; ಆರೋಪ

Update: 2022-09-02 12:22 IST

Photo: Twitter/@CuttackDM

ಭುವನೇಶ್ವರ: ತಮ್ಮ ಐಕಾನ್ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ (Padma Shri Winner)ಕಮಲಾ ಪೂಜಾರಿ ಅವರನ್ನು ಡಿಸ್ಚಾರ್ಜ್ ಮಾಡುವ ಮೊದಲು ಕಟಕ್‌ನ ಆಸ್ಪತ್ರೆಯೊಳಗೆ ( Hospital) ನೃತ್ಯ(Dance) ಮಾಡಲು ಒತ್ತಾಯಿಸಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒಡಿಶಾದ ಪರಾಜ ಬುಡಕಟ್ಟು ಸಮುದಾಯದ ಸದಸ್ಯರು ಒತ್ತಾಯಿಸಿದ್ದಾರೆ.

ಸರಕಾರಿ ಆಸ್ಪತ್ರೆಯ ಐಸಿಯುನಲ್ಲಿ ವೃದ್ಧೆ ಕಮಲಾ  ನೃತ್ಯ ಮಾಡುತ್ತಿರುವ ವೀಡಿಯೊ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. ಪಿಟಿಐಗೆ ತುಣುಕಿನ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ.

ಸಾಮಾಜಿಕ ಕಾರ್ಯಕರ್ತೆ ಮಮತಾ ಬೆಹೆರಾ ಕೂಡ ಕಮಲಾ ಅವರೊಂದಿಗೆ ನೃತ್ಯ ಮಾಡುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.

"ನನಗೆ ನೃತ್ಯ ಮಾಡಲು ಇಷ್ಟವಿರಲಿಲ್ಲ.  ಆದರೆ ನೃತ್ಯ ಮಾಡಲು ಒತ್ತಾಯಿಸಲಾಯಿತು. ನಾನು ಪದೇ ಪದೇ ನಿರಾಕರಿಸಿದರೂ ಅವರು (ಮಮತಾ ಬೆಹೆರಾ)ನನ್ನ ಮಾತು ಕೇಳಲಿಲ್ಲ. ನಾನು ಅನಾರೋಗ್ಯದಿಂದ ಬಳಲುತ್ತಿದ್ದು, ದಣಿದಿರುವೆ ”ಎಂದು ಕಮಲಾ ಪೂಜಾರಿ ಅವರು ಕೊರಾಪುಟ್ ಜಿಲ್ಲೆಯ ದೂರದರ್ಶನ ಚಾನೆಲ್‌ಗಳಿಗೆ ತಿಳಿಸಿದರು.

ಸಮಾಜ ಸೇವಕಿಯ ವಿರುದ್ಧ ರಾಜ್ಯ ಸರಕಾರ ಕ್ರಮ ಕೈಗೊಳ್ಳಲು ವಿಫಲವಾದರೆ ಸಮಾಜ ಬಾಂಧವರು ಬೀದಿಗಿಳಿಯಲಿದ್ದಾರೆ ಎಂದು ಬುಡಕಟ್ಟು ಸಮುದಾಯದ ‘ಪರಜಾ ಸಮಾಜ’ದ ಅಧ್ಯಕ್ಷ ಹರೀಶ್ ಮುದುಳಿ ಎಚ್ಚರಿಕೆ ನೀಡಿದರು.

ಸಾವಯವ ಕೃಷಿಗೆ ಉತ್ತೇಜನ ನೀಡಿದ ಹಾಗೂ  ಭತ್ತ ಸೇರಿದಂತೆ ವಿವಿಧ ಬೆಳೆಗಳ 100 ಕ್ಕೂ ಹೆಚ್ಚು ದೇಶೀಯ ಬೀಜಗಳನ್ನು ಸಂರಕ್ಷಿಸಿದ್ದಕ್ಕಾಗಿ 2019 ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಕಮಲಾ ಪೂಜಾರಿ ಅವರನ್ನು ಮೂತ್ರಪಿಂಡದ ಸಮಸ್ಯೆಗಾಗಿ ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News