ಉದ್ಯಾವರ: ಮಂಜುನಾಥ ಉದ್ಯಾವರ ಬಸ್ಸು ತಂಗುದಾಣ ಉದ್ಘಾಟನೆ
ಉದ್ಯಾವರ, ಸೆ.2: ಉದ್ಯಾವರದ ಸಾಮಾಜಿಕ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಹತ್ತನೇ ವರ್ಷದ ಮಂಜುನಾಥ ಉದ್ಯಾವರ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ ಉದ್ಯಾವರ ಬೋಳಾರುಗುಡ್ಡೆ ಪಂಚಾಯತ್ ಕಚೇರಿ ಬಳಿ ದಾನಿಗಳ ನೆರವಿನಿಂದ ನಿರ್ಮಿಸಿ ರುವ ‘ಮಂಜುನಾಥ ಉದ್ಯಾವರ ಬಸ್ಸು ತಂಗುದಾಣ’ವನ್ನು ಮಂಜುನಾಥ ಉದ್ಯಾವರ ಅವರ ಒಡನಾಡಿಗಳೂ, ಕರ್ನಾಟಕ ವಿಧಾನ ಪರಿಷತ್ ಸದಸ್ಯರೂ ಆದ ಡಾ.ಮಂಜುನಾಥ ಭಂಡಾರಿ ಮತ್ತು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಜಂಟಿಯಾಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸಂಚಾಲಕರಾದ ಹರೀಶ್ ಕಿಣಿ,ದಿನೇಶ್ ಪುತ್ರನ್, ಕೃಷ್ಣಮೂರ್ತಿ ಕಾರ್ಕಳ, ಮಾಜಿ ಜಿಪಂ ಸದಸ್ಯೆ ಐಡಾ ಗಿಬ್ಬ ಡಿಸೋಜಾ, ರಘುಪತಿ ಬಲ್ಲಾಳ್, ಲಕ್ಮಣ ಶೆಣೈ, ಸಾಯಿನಾಥ್ ಹೆಗ್ಡೆ, ಇರ್ಷಾದ್ ಅಹಮ್ಮದ್ ಉಡುಪಿ, ದಿನಕರ ಹೇರೂರು, ಸಂಸ್ಥೆಯ ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್, ಅಧ್ಯಕ್ಷ ರಿಯಾಝ್ ಪಳ್ಳಿ, ಪ್ರಧಾನ ಕಾರ್ಯದರ್ಶಿ ತಿಲಕರಾಜ್ ಸಾಲಿಯಾನ್, ಕೋಶಾಧಿಕಾರಿ ಗಿರೀಶ್ ಗುಡ್ಡೆಯಂಗಡಿ, ಮಾಜಿ ಅಧ್ಯಕ್ಷ ಶರತ್ ಕುಮಾರ್, ಅಬಿದ್ ಆಲಿ ಮೊದಲಾದವರು ಉಪಸ್ಥಿರಿದ್ದರು.