×
Ad

ಪಲಾಯನ ಮಾಡಿದ್ದ ಮಾಜಿ ಅಧ್ಯಕ್ಷ ಗೋತಬಯ ರಾಜಪಕ್ಸ ಶ್ರೀಲಂಕಾಕ್ಕೆ ವಾಪಸ್

Update: 2022-09-03 10:32 IST
Photo:twitter

ಕೊಲಂಬೊ: ದ್ವೀಪರಾಷ್ಟ್ರ  ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟು (island's worst-ever economic crisis) ಎದುರಿಸುತ್ತಿದ್ದಾಗ ನಾಗರಿಕರ ಭಾರೀ ಪ್ರತಿಭಟನೆಯ ವೇಳೆ ದೇಶದಿಂದ ಪಲಾಯನ ಮಾಡಿದ್ದ  ಏಳು ವಾರಗಳ ನಂತರ ಶ್ರೀಲಂಕಾದ ಪದಚ್ಯುತ ಮಾಜಿ ಅಧ್ಯಕ್ಷ ಗೋತಬಯ ರಾಜಪಕ್ಸ ( Sri Lanka's deposed former president Gotabaya Rajapaksa) ಶುಕ್ರವಾರ ತಮ್ಮ ದೇಶಕ್ಕೆ ಮರಳಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜಪಕ್ಸೆ ಅವರು ಮುಖ್ಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಮಂತ್ರಿಗಳು ಹಾಗೂ ರಾಜಕಾರಣಿಗಳು ಹೂಗುಚ್ಚ ನೀಡಿ  ಸ್ವಾಗತಿಸಿದರು.

"ಅವರು ವಿಮಾನದಿಂದ ಹೊರಬರುತ್ತಿದ್ದಂತೆ ಅವರಿಗೆ ಹೂ ಹಾರ ಹಾಕಲು ಸರಕಾರಿ ರಾಜಕಾರಣಿಗಳ ನೂಕುನುಗ್ಗಲು ಇತ್ತು" ಎಂದು ಅಧಿಕಾರಿಯೊಬ್ಬರು ಎಎಫ್‌ಪಿಗೆ ತಿಳಿಸಿದರು.

ರಾಷ್ಟ್ರ ಹಿಂದೆಂದೂ ಕಂಡರಿಯದ  ಆರ್ಥಿಕ ಬಿಕ್ಕಟ್ಟಿಗೆ ರಾಜಪಕ್ಸೆಯನ್ನು ದೂಷಿಸಿದ್ದ ಶ್ರೀಲಂಕಾ ನಾಗರಿಕರು  ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ನುಗ್ಗಿದ ನಂತರ ಜುಲೈ ಮಧ್ಯದಲ್ಲಿ ರಾಜಪಕ್ಸೆ ಅವರು ಮಿಲಿಟರಿ ಬೆಂಗಾವಲು ಅಡಿಯಲ್ಲಿ ದೇಶದಿಂದ ಪಲಾಯನ ಮಾಡಿದ್ದರು.

ರಾಜಪಕ್ಸೆ ಅವರು ಥೈಲ್ಯಾಂಡ್‌ಗೆ ಹಾರುವ ಮೊದಲು ಸಿಂಗಾಪುರದಿಂದ ತಮ್ಮ ರಾಜೀನಾಮೆ ಪತ್ರವನ್ನು ಕಳುಹಿಸಿದ್ದರು.  ಅಲ್ಲಿಂದ ಅವರು ಹಿಂದಿರುಗಲು ಅನುಕೂಲವಾಗುವಂತೆ ತಮ್ಮ ಉತ್ತರಾಧಿಕಾರಿ ರಾನಿಲ್ ವಿಕ್ರಮಸಿಂಘೆಗೆ ಮನವಿ ಸಲ್ಲಿಸಿದ್ದರು.

73 ವರ್ಷದ ರಾಜಪಕ್ಸೆ ಬ್ಯಾಂಕಾಕ್‌ನಿಂದ ಸಿಂಗಾಪುರದ ಮೂಲಕ ವಾಣಿಜ್ಯ ವಿಮಾನದಲ್ಲಿ ಆಗಮಿಸಿ  ತನ್ನ 52 ದಿನಗಳ ಸ್ವಯಂ-ಘೋಷಿತ ದೇಶಭ್ರಷ್ಟತೆಯನ್ನು ಕೊನೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News