ಸೂಟ್‌ಕೇಸ್‌ನಲ್ಲಿ ಶಾಲಾ ಬಾಲಕಿಯ ಶವ ಪತ್ತೆಯಾದ ವಾರದ ನಂತರ ಗುಜರಾತ್‌ನಲ್ಲಿ ಇಬ್ಬರ ಬಂಧನ
ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಲಿವ್ ಪ್ರದೇಶದಲ್ಲಿ ರಸ್ತೆಯಲ್ಲಿ ಎಸೆದಿದ್ದ ಸೂಟ್‌ಕೇಸ್‌ನಲ್ಲಿ ಹದಿಹರೆಯದ ಹುಡುಗಿಯ ಶವ ಪತ್ತೆಯಾದ (Mumbai Girl's Body Found In Suitcase)ಒಂದು ವಾರದ ನಂತರ ಅಪರಾಧದ ತನಿಖೆ ನಡೆಸುತ್ತಿರುವ ಪೊಲೀಸರು ಗುಜರಾತ್‌ನಲ್ಲಿ ಇಬ್ಬರನ್ನು ಬಂಧಿಸಿದ್ದಾರೆ (2 Arrested From Gujarat)ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಮುಂಬೈನ ಅಂಧೇರಿಯ 14 ವರ್ಷದ ಶಾಲಾ ವಿದ್ಯಾರ್ಥಿನಿಯ ಶವವು ಅನೇಕ ಇರಿತದ ಗಾಯಗಳೊಂದಿಗೆ ಆಗಸ್ಟ್ 26 ರಂದು ನೈಗಾಂವ್ ಬಳಿ ರಸ್ತೆ ಬದಿಯ ಪೊದೆಗಳಲ್ಲಿ ಎಸೆದಿದ್ದ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿತ್ತು.
ಬಾಲಕಿ ಆಗಸ್ಟ್ 25 ರಂದು ಶಾಲೆಗೆ ತೆರಳಿದ ನಂತರ ನಾಪತ್ತೆಯಾಗಿದ್ದಳು, ನಂತರ ಮುಂಬೈ ಪೊಲೀಸರು ಅಪಹರಣದ ಪ್ರಕರಣವನ್ನು ದಾಖಲಿಸಿದ್ದರು.
ಪ್ರಾಥಮಿಕ ತನಿಖೆಯಲ್ಲಿ ಹದಿಹರೆಯದ ಬಾಲಕಿಯ ಕೊಲೆಯಲ್ಲಿ ಇಬ್ಬರ ಪಾತ್ರವಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮೀರಾ ಭಾಯಂದರ್ ವಸಾಯಿ ವಿರಾರ್ (MBVV) ಪೊಲೀಸರು ಸುಮಾರು 21 ವರ್ಷ ವಯಸ್ಸಿನ ಇಬ್ಬರು ಶಂಕಿತರ ಚಿತ್ರಗಳನ್ನು ಬಿಡುಗಡೆ ಮಾಡಿದ್ದರು. ಇದೀಗ ಇಬ್ಬರು ಆರೋಪಿಗಳನ್ನು ಶುಕ್ರವಾರ ರಾತ್ರಿ ಗುಜರಾತ್‌ನ ಪಾಲನ್‌ಪುರದಿಂದ ಬಂಧಿಸಲಾಗಿದ್ದು, ಕೊಲೆಯ ಹಿಂದಿನ ಉದ್ದೇಶವನ್ನು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.