×
Ad

ಸ್ವಿಗ್ಗಿ ಸಂಸ್ಥೆ ಡೆಲಿವರಿ ಬಾಯ್ಸ್ ಮುಷ್ಕರ: ಸಂಧಾನ ಸಭೆ

Update: 2022-09-03 21:34 IST

ಉಡುಪಿ, ಸೆ.3: ಸ್ವಿಗ್ಗಿ ಸಂಸ್ಥೆ ಅಳವಡಿಸಿದ ಕೆಲವೊಂದು ನಿಯಮದ ವಿರುದ್ಧ ಡೆಲಿವರಿ ಬಾಯ್ಸ್ ಮುಷ್ಕರ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್ ಇಂದು ಸ್ವಿಗ್ಗಿ ಸಂಸ್ಥೆಯ ಅಧಿಕಾರಿಗಳು ಹಾಗೂ ಡೆಲಿವರಿ ಬಾಯ್ಸ್ ಜೊತೆ ಸಂಧಾನ ಸಭೆ ನಡೆಸಿದರು.

ಸಂಸ್ಥೆಯ ಕೆಲವೊಂದು ತಾಂತ್ರಿಕ ಸಮಸ್ಯೆಗಳ ಬಗ್ಗೆ ಡೆಲಿವರಿ ಮಾಡುವ ಹುಡುಗರು ಸಭೆಯಲ್ಲಿ ಗಮನಕ್ಕೆ ತಂದರು. ಇದನ್ನು ಶೀಘ್ರದಲ್ಲಿ ಸರಿಪಡಿಸುವಂತೆ ಸ್ವಿಗ್ಗಿ ಸಂಸ್ಥೆಯ ಅಧಿಕಾರಿಗಳಿಗೆ ಶಾಸಕ ರಘುಪತಿ ಭಟ್ ಸೂಚಿಸಿ ಮುಷ್ಕರವನ್ನು ಕೈ ಬಿಡುವಂತೆ ಡೆಲಿವರಿ ಬಾಯ್ಸ್ ಅವರಲ್ಲಿ ವಿನಂತಿಸಿದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News