×
Ad

ಪಾಕ್ ಎದುರು ಭಾರತದ ಸೋಲನ್ನು ವಿಶ್ಲೇಷಿಸಿ ಟೀಕೆಗೊಳಗಾದ ಸುಧೀರ್ ಚೌಧರಿ

Update: 2022-09-05 18:54 IST
ಸುಧೀರ್ ಚೌಧರಿ (Photo: twitter/imrajchoudhary7)

ಹೊಸದಿಲ್ಲಿ: ರವಿವಾರ ಏಷ್ಯಾ ಕಪ್( Asia Cup) ಪಂದ್ಯಾವಳಿಯ ಭಾಗವಾಗಿ ನಡೆದ ಭಾರತ-ಪಾಕಿಸ್ತಾನ( India-Pak) ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನದೆದುರು ಸೋಲುಂಡಿರುವುದನ್ನು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿ 'ಆಜ್ ತಕ್‍'ನ ಸುಧೀರ್ ಚೌಧರಿ(Sudhir Chaudhary) ವಿವಾದಕ್ಕೀಡಾಗಿದ್ದಾರೆ.

"ಅರ್ಧಕ್ಕಿಂತ ಹೆಚ್ಚು ಭಾರತೀಯ ಆಟಗಾರರು ಬಿಲಿಯಾಧಿಪತಿಗಳಾಗಿದ್ದಾರೆ.  ಭಾರತೀಯ ಆಟಗಾರರು ಖಾಸಗಿ ಜೆಟ್‍ಗಳಲ್ಲಿ ಪ್ರಯಾಣಿಸುತ್ತಾರೆ, ಐಷಾರಾಮಿ ಜೀವನ ನಡೆಸುತ್ತಾರೆ ಮತ್ತು ಸೂಪರ್ ಸ್ಟಾರ್‍ಗಳಾಗಿದ್ದಾರೆ.  ಆದರೂ ಪಾಕಿಸ್ತಾನಿ ಆಟಗಾರರು ನಮ್ಮೆದುರು ಜಯ ಗಳಿಸುತ್ತಾರೆ. ಏಕೆಂದರೆ ಭಾರತದ ವಿರುದ್ಧ ದ್ವೇಷ ಮತ್ತು ಪ್ರತೀಕಾರದ ಭಾವನೆ ಅವರಲ್ಲಿ ತುಂಬಿದೆ,'' ಎಂದು ಸುಧೀರ್ ಚೌಧರಿ ಟ್ವೀಟ್ ಮಾಡಿದ್ದಾರೆ.

ಇನ್ನೊಂದು ಟ್ವೀಟ್‍ನಲ್ಲಿ "ಭಾರತೀಯ ಆಟಗಾರರಿಗೆ ಇದು ಕೇವಲ ಇನ್ನೊಂದು ಕ್ರಿಕೆಟ್ ಆಟ, ಆದರೆ ಪಾಕಿಸ್ತಾನೀಯರಿಗೆ ಇದು ಸಾವು, ಬದುಕಿನ ಮತ್ತು ಅವರ ಹೆಮ್ಮೆಯ ಪ್ರಶ್ನೆ. ಅದೇ ಕಾರಣದಿಂದ ಪಂದ್ಯ ನಮ್ಮ ಕೈತಪ್ಪಿ ಹೋಯಿತು ಹಾಗೂ ಪಾಕಿಸ್ತಾನೀಯರು ಕೊನೆಯ ಚೆಂಡಿನ ತನಕ ಹೋರಾಡಿದರು,'' ಎಂದು ಚೌಧರಿ ಬರೆದಿದ್ದಾರೆ.

ಇದೇ ವಿಚಾರ ಮುಂದಿಟ್ಟುಕೊಂಡು ಸುಧೀರ್ ಚೌಧರಿ ಅವರನ್ನು ಹಲವು ಮಂದಿ ಟ್ವಿಟ್ಟರಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

"ಇದೇ ತರ್ಕದಲ್ಲಿ ಮುಂದುವರಿಯುವುದಾದರೆ, ಸುದ್ದಿ ಚಾನೆಲ್ ನಿರೂಪಕರು ವರ್ಷಗಳಿಂದ ಬೆಳೆಸಿರುವ ಹಿಂದು-ಮುಸ್ಲಿಂ ಮತ್ತು ಭಾರತ-ಪಾಕ್ ದ್ವೇಷದ ವಾತಾವರಣದಿಂದ ಕೋಟಿಗಟ್ಟಲೆ ಗಳಿಸಿದ್ದಾರೆ. ಜನರ ಧ್ರುವೀಕರಣದ ಮೂಲಕ  ಹೆಚ್ಚು ಟಿಆರ್ಪಿ ಗಳನ್ನು ಗಳಿಸುವುದು ನಿಮ್ಮ ಬಿಸಿನೆಸ್ ಮಾಡೆಲ್,'' ಎಂದು ಟ್ವಿಟ್ಟರಿಗರೊಬ್ಬರು ಸುಧೀರ್ ಚೌಧರಿಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಕ್ಯಾಬ್ ಚಾಲಕನಿಗೆ ಹಲ್ಲೆ ನಡೆಸಿ 'ಜೈ ಶ್ರೀ ರಾಮ್' ಹೇಳಲು ಬಲವಂತಪಡಿಸಿದ ದುಷ್ಕರ್ಮಿಗಳು; ಆರೋಪ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News