×
Ad

ಕೇವಲ 4% ಜನರಷ್ಟೇ ತೆರಿಗೆ ಕಟ್ಟುತ್ತಾರೆ: ಹಿಜಾಬ್‌ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಗುಪ್ತಾ

Update: 2022-09-05 23:29 IST

ಹೊಸದಿಲ್ಲಿ: ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್(Supreme Court) ಪೀಠವು ಸೋಮವಾರ ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿದ(Hijab Case) ಕರ್ನಾಟಕ ಸರ್ಕಾರದ ಆದೇಶಗಳನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ನಡೆಸಿತು. ವಿಚಾರಣೆ ವೇಳೆ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಸರ್ಕಾರ ಎಲ್ಲರಿಂದ ಧನಸಹಾಯ ಪಡೆಯುವುದಿಲ್ಲ. ಕೇವಲ 4% ಜನರಷ್ಟೇ ಆದಾಯ ತೆರಿಗೆ ಕಟ್ಟುತ್ತಾರೆ ಎಂದು ಹೇಳಿದ್ದಾಗಿ livelaw.in ವರದಿ ಮಾಡಿದೆ.

ಅರ್ಜಿದಾರರ ಪರ ವಾದ ಸಲ್ಲಿಸಿದ ಹಿರಿಯ ವಕೀಲ ಸಂಜಯ್‌ ಹೆಗ್ಡೆ ಅವರು, “ವಯಸ್ಕ ಮಹಿಳೆಯರಲ್ಲಿ ಏನು ಧರಿಸಬೇಕು, ಏನು ಧರಿಸಬಾರದು ಎಂಬ ಅಧಿಕಾರವು ನಿಮಗಿಲ್ಲ ಎಂದು ಹೇಳುವುದು ಸರಿಯಲ್ಲ” ಎಂದು ವಾದ ಮಂಡಿಸಿದರು. 

ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಮಾತನಾಡಿ, ವಿವಿಧ ಸ್ಥಳಗಳಿಗೆ ವಿಭಿನ್ನ ವಸ್ತ್ರ ಸಂಹಿತೆ ಅಗತ್ಯವಿದೆ ಎಂದು ಹೇಳಿದರು. ನ್ಯಾಯಾಲಯದಲ್ಲಿ ವಾದ ಮಾಡುವಾಗ ವಕೀಲರು ಜೀನ್ಸ್ ಧರಿಸುವುದನ್ನು ನಿರ್ಬಂಧಿಸಲಾಗಿದೆ, ಗಾಲ್ಫ್ ಕೋರ್ಸ್‌ನಲ್ಲಿ ನಿರ್ದಿಷ್ಟ ಡ್ರೆಸ್ ಕೋಡ್ ಅಗತ್ಯವಿದೆ, ಕೆಲವು ರೆಸ್ಟೋರೆಂಟ್‌ಗಳು ಔಪಚಾರಿಕ ಡ್ರೆಸ್ ಕೋಡ್ ಅನ್ನು ಹೊಂದಿರುವ ಬಗ್ಗೆ ನ್ಯಾಯಮೂರ್ತಿ  ಉದಾಹರಣೆಗಳನ್ನು ನೀಡಿ, ವಿವಿಧ ಸ್ಥಳಗಳಿಗೆ ವಿಭಿನ್ನ ಡ್ರೆಸ್‌ ಕೋಡ್‌ ಅಗತ್ಯವಿದೆ ಎಂದು ಹೇಳಿದರು.

ತಮ್ಮ ವಾದವನ್ನು ಮುಂದುವರೆಸಿದ ಸಂಜಯ್‌ ಹೆಗ್ಡೆ, ಎಲ್ಲವೂ ಸಂದರ್ಭಕ್ಕೆ ತಕ್ಕಂತೆ. ಈ ಉದಾಹರಣೆಗಳನ್ನು ಇಲ್ಲಿ ಅನ್ವಯವಾಗುವುದಿಲ್ಲ. ವಿಷಯವಿರುವುದು ಸರ್ಕಾರಿ ಕಾಲೇಜುಗಳ ಬಗ್ಗೆ, ಸರ್ಕಾರಿ ಕಾಲೇಜುಗಳು ಪ್ರತಿಯೊಬ್ಬರ ಧನಸಹಾಯವನ್ನು ಪಡೆದಿದೆ ಎಂದು ತೆರಿಗೆದಾರರನ್ನುದ್ದೇಶಿಸಿ ಹೇಳಿದರು.

ನ್ಯಾಯಮೂರ್ತಿ ಗುಪ್ತಾ ಪ್ರತಿಕ್ರಿಯಿಸಿ, ಸರ್ಕಾರ ಎಲ್ಲರಿಂದ ಧನಸಹಾಯ ಪಡೆಯುವುದಿಲ್ಲ. ಕೇವಲ 4% ಜನರಷ್ಟೇ ಆದಾಯ ತೆರಿಗೆ ಕಟ್ಟುತ್ತಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News