‘ಕಿಂಗ್ಸ್ ವೇ’ಗೆ ‘ಕರ್ತವ್ಯ ಪಥ’ ಎಂದು ಮರುನಾಮಕರಣ ಮಾಡಿದ ಕೇಂದ್ರ ಸರಕಾರ
Update: 2022-09-05 23:50 IST
ಹೊಸದಿಲ್ಲಿ, ಸೆ. 5: ರಾಜಪಥ ಹಾಗೂ ಕೇಂದ್ರ ವಿಸ್ಟಾ ಹುಲ್ಲುಹಾಸಿಗೆ ‘ಕರ್ತವ್ಯ ಪಥ’ ಎಂದು ಮರು ನಾಮಕರಣ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ
ಈ ರಸ್ತೆಗೆ ಬ್ರಿಟೀಷರು ನೀಡಿದ್ದ ‘ಕಿಂಗ್ಸ್‌ವೇ’ ಎಂಬ ಹೆಸರನ್ನು ಹಿಂದಿಯಲ್ಲಿ ರಾಜಪಥ ಎಂದು ಭಾಷಾಂತರಿಸಲಾಗಿತ್ತು. ಹೊಸದಿಲ್ಲಿ ಹಾಗೂ ಸುತ್ತಮುತ್ತ ವಸಾಹುತಶಾಹಿ ಪರಂಪರೆಯ ಚಿತ್ರಗಳನ್ನು ಅಳಿಸುವ ಮೋದಿ ಸರಕಾರದ ಸರಣಿ ಪ್ರಯತ್ನದ ನಡುವೆ ಈ ಬೆಳವಣಿಗೆ ನಡೆದಿದೆ.
ಮೊದಲು ಪ್ರಧಾನಿ ಅವರ ನಿವಾಸಕ್ಕೆ ಸಾಗುವ ರೇಸ್ ಕೋರ್ಸ್ ರಸ್ತೆಗೆ ಲೋಕ ಕಲ್ಯಾಣ ಮಾರ್ಗ್ ಎಂದು ಕೇಂದ್ರ ಸರಕಾರ ಮರು ನಾಮಕರಣ ಮಾಡಿತು. ಅನಂತರ ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಭೋಸರ ಹೋಲೋಗ್ರಾಂ ಪ್ರತಿಮೆಯನ್ನು ಅನಾವರಣಗೊಳಿಸಿತು. ಕಳೆದ ವಾರ ನೌಕಾ ಪಡೆಯ ನೂತನ ಧ್ವಜವನ್ನು ಅನಾವರಣಗೊಳಿಸಿತ್ತು.