×
Ad

ಏಶ್ಯಕಪ್‌ನ ಸೂಪರ್-4 ಪಂದ್ಯ: ಶ್ರೀಲಂಕಾಕ್ಕೆ 174 ರನ್ ಗುರಿ ನೀಡಿದ ಭಾರತ

Update: 2022-09-06 21:34 IST
Photo:twitter

 ದುಬೈ, ಸೆ.6: ನಾಯಕ ರೋಹಿತ್ ಶರ್ಮಾ (Rohit sharma) ಅವರ ಆಕರ್ಷಕ ಅರ್ಧಶತಕದ(72 ರನ್, 41 ಎಸೆತ, 5 ಬೌಂಡರಿ, 4 ಸಿಕ್ಸರ್)ಸಹಾಯದಿಂದ ಭಾರತವು ಶ್ರೀಲಂಕಾ ತಂಡಕ್ಕೆ ಏಶ್ಯಕಪ್‌ನ ಸೂಪರ್-4 ಪಂದ್ಯ (Asia cup) ಗೆಲುವಿಗೆ 174 ರನ್ ಗುರಿ ನೀಡಿದೆ.

ಮಂಗಳವಾರ ಟಾಸ್ ಜಯಿಸಿದ ಶ್ರೀಲಂಕಾ ತಂಡ ಭಾರತವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿತು. ಭಾರತವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 173 ರನ್ ಗಳಿಸಿತು.

ಮೊದಲ 3 ಓವರ್‌ನೊಳಗೆ 13 ರನ್‌ಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡ ಭಾರತವು ಕಳಪೆ ಆರಂಭ ಪಡೆಯಿತು. ಆರಂಭಿಕ ಬ್ಯಾಟರ್ ಕೆ.ಎಲ್.ರಾಹುಲ್ ಕೇವಲ ಆರು ರನ್ ಗಳಿಸಿದರೆ, ಮಾಜಿ ನಾಯಕ ವಿರಾಟ್ ಕೊಹ್ಲಿ 4 ಎಸೆತ ಎದುರಿಸಿದರೂ ರನ್ ಖಾತೆ ತೆರೆಯಲು ವಿಫಲರಾಗಿ ವಿಕೆಟ್ ಒಪ್ಪಿಸಿದರು. ಆಗ ತಂಡಕ್ಕೆ ಆಸರೆಯಾದ ರೋಹಿತ್ ಹಾಗೂ ಸೂರ್ಯಕುಮಾರ್ ಯಾದವ್(34 ರನ್, 29 ಎಸೆತ)3ನೇ ವಿಕೆಟಿಗೆ 97 ರನ್ ಜೊತೆಯಾಟ ನಡೆಸಿದರು. ರೋಹಿತ್ 32 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು.

5ನೇ ವಿಕೆಟಿಗೆ 30 ರನ್ ಸೇರಿಸಿದ ಹಾರ್ದಿಕ್ ಪಾಂಡ್ಯ(17 ರನ್, 13 ಎಸೆತ) ಹಾಗೂ ರಿಷಭ್ ಪಂತ್(17 ರನ್,13 ಎಸೆತ)ತಂಡದ ಮೊತ್ತ ಹೆಚ್ಚಿಸಲು ಯತ್ನಿಸಿದರು. ಪಾಂಡ್ಯ ವಿಕೆಟ್ ಪಡೆದ ನಾಯಕ ದಸುನ್ ಶನಕ(2-26) ಈ ಜೋಡಿಯನ್ನು ಬೇರ್ಪಡಿಸಿದರು. ದೀಪಕ್ ಹೂಡಾ(3 ರನ್) ಹಾಗೂ ರಿಷಭ್ ಪಂತ್ 19ನೇ ಓವರ್‌ನಲ್ಲಿ ದಿಲ್ಶನ್ ಮದುಶಂಕ(3-24)ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಆರ್.ಅಶ್ವಿನ್ ಔಟಾಗದೆ 15 ರನ್(7 ಎಸೆತ, 1 ಸಿಕ್ಸರ್)ತಂಡದ ಮೊತ್ತವನ್ನು 173ಕ್ಕೆ ತಲುಪಿಸಿದರು.

ಚಮಿಕಾ ಕರುಣರತ್ನೆ (2-27), ಶನಕಾ(2-26)ತಲಾ ಎರಡು ವಿಕೆಟ್ ಪಡೆದರು. ಮದುಶಂಕ ಯಶಸ್ವಿ ಬೌಲರ್ ಎನಿಸಿಕೊಂಡರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News