ವಿದ್ಯಾರ್ಥಿ, ಶಿಕ್ಷಕರು ಬಲಿಷ್ಠರಾದಾಗ ಮಾತ್ರ ದೇಶ ಬಲಿಷ್ಠವಾಗಬಲ್ಲದು: ಯು.ಟಿ. ಖಾದರ್

Update: 2022-09-06 17:00 GMT

ಭಟ್ಕಳ : ಎಂ.ಪಿ., ಎಂ.ಎಲ್.ಎ., ಎಸಿ ರೂಮಿನಲ್ಲಿ ಕುಳಿಕೊಳ್ಳುವ ಅಧಿಕಾರಿಗಳು ಬಲಿಷ್ಠಗೊಂಡರೆ ದೇಶ ಬಲಿಷ್ಠವಾಗದು, ಬದಲಾಗಿ ವರ್ಗದಕೋಣೆಯಲ್ಲಿ ಶಿಕ್ಷಣ ಕಲಿಯುವ, ಆಟದ ಮೈದಾನದಲ್ಲಿ ಆಟವಾಡುವ ವಿದ್ಯಾರ್ಥಿಗಳು ಬಲಿಷ್ಠರಾದಾಗ ಮಾತ್ರ ದೇಶ ಬಲಿಷ್ಠವಾಗಬಲ್ಲದು ಎಂದು ಮಾಜಿ ಸಚಿವ ಹಾಗೂ ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಯು.ಟಿ.ಖಾದರ್ ಹೇಳಿದರು.

ಅವರು ಆಲ್ ಇಂಡಿಯಾ ಐಡಿಯಲ್ ಟೀರ‍್ಸ್ ಅಸೋಸಿಯೇಶನ್ ಕರ್ನಾಟಕ ಸೋಮವಾರ ರಾತ್ರಿ ಆಯೋಜಿಸಿದ್ದ ರಾಜ್ಯಮಟ್ಟದ ಆನ್‌ಲೈನ್ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿರು.

ಶಿಕ್ಷಕರು ಸಮಾಜವನ್ನು ನಿರ್ಮಿಸುತ್ತಿರುವ ದೇಶದ ದೊಡ್ಡ ಶಕ್ತಿಯಾಗಿದ್ದಾರೆ. ಇಂದು ನಾನು ಈ ಸ್ಥಾನಕ್ಕೇರಲು ನನ್ನ ಪಾಲಕ ಪೋಷಕರಷ್ಟೇ ಶಿಕ್ಷಕರೂ ಕೂಡ ಕಾರಣರಾಗಿದ್ದಾರೆ. ಶಿಕ್ಷಕ ದಿನಾಚರಣೆಯ ಈ ಸಂದರ್ಭದಲ್ಲಿ ಅಂದು ನನ್ನ ಶಿಕ್ಷಕರು ನನಗೆ ನೀಡಿದ ಪ್ರೋತ್ಸಾಹ, ಮಾರ್ಗದರ್ಶನವನ್ನು ಸ್ಮರಿಸಿಕೊಳ್ಳುತ್ತಿದ್ದೇನೆ. ಭವಿಷ್ಯದಲ್ಲಿ ಎಲ್ಲರೂ ಅತ್ಯುತ್ತಮ ಶಿಕ್ಷಕರಾಗಿ ರೂಪುಗೊಳ್ಳಬೇಕು, ನಿಮ್ಮ ನಿಮ್ಮ ವಿದ್ಯಾರ್ಥಿ ವರ್ಗವನ್ನು ಅತ್ಯಂತ ಪ್ರೀತಿ ಮತ್ತು ಕರುಣೆಯಿಂದ ಅವರನ್ನು ದೇಶದ ಸತ್‌ಪ್ರಜೆಯನ್ನಾಗಿ ಮಾಡುತ್ತೀರೆಂಬ ವಿಶ್ವಾಸ ನನಗಿದೆ ಎಂದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಿ.ಪಿ. ವೀರಭದ್ರಪ್ಪ ಮಾತನಾಡಿದರು.

ಶಿಕ್ಷಣ ತಜ್ಞ ಸೈಯ್ಯದ್ ತನ್ವೀರ್ ಆಹ್ಮದ್ ಶಿಕ್ಷಣ ನೀತಿ, ಶೈಕ್ಷಣಿಕ ಸಮಸ್ಯೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ರಾ‌ಷ್ಟ್ರೀಯ ಅಧ್ಯಕ್ಷ ಅಬ್ದುಲ್ ರಹೀಮ್ ಶೇಖ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಐಟಾ ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ರಾಜ್ಯಕಾರ್ಯದರ್ಶಿ ಯಾಸೀನ್ ಭೀಕ್ಬಾ ವಂದಿಸಿದರು. ವಿಭಾಗೀಯ ಕಾರ್ಯದರ್ಶಿ ಸಲೀಮ್ ಪಾಶ ರಾಯಚೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News