ಸ್ವೀಡನ್ ರಾಜಕಾರಣಿಗಳಿಂದ ಹವಾಮಾನ ಬಿಕ್ಕಟ್ಟಿನ ಕಡೆಗಣನೆ : ಗ್ರೆಟಾ ಥನ್‌ಬರ್ಗ್

Update: 2022-09-06 17:36 GMT

ಸ್ಟಾಕ್‌ಹೋಮ್, ಸೆ.೬: ಚುನಾವಣೆಯ ಪೂರ್ವದಲ್ಲಿ ಸ್ವೀಡನ್‌ನ ರಾಜಕಾರಣಿಗಳು ಹವಾಮಾನ ಬಿಕ್ಕಟ್ಟಿನ ಗಂಭೀರತೆಯನ್ನು ಕಡೆಗಣಿಸುತ್ತಿದ್ದು , ಇದು ಸಾವು-ಬದುಕಿನ ಬೆದರಿಕೆ ಎಂಬುದನ್ನು ಮರೆತು ಕೇವಲ ಒಂದು ಸಮಸ್ಯೆ ಎಂಬAತೆ ವರ್ತಿಸುತ್ತಿದ್ದಾರೆ ಎಂದು ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಹೇಳಿದ್ದಾರೆ.

ಸ್ವೀಡನ್‌ನಲ್ಲಿ ಸೆಪ್ಟಂಬರ್ ೧೧ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಯುಕ್ರೇನ್ ಯುದ್ಧದಿಂದ ತಲೆದೋರಿರುವ ಇಂಧನ ಸಮಸ್ಯೆ, ಬೆಲೆಯೇರಿಕೆ, ಶಾಲೆಗಳಲ್ಲಿ ಮತ್ತು ಸಾರ್ವಜನಿಕ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳ ಬಗ್ಗೆ  ಚುನಾವಣೆಯ ಸಂದರ್ಭ ಚರ್ಚೆ ನಡೆದಿದೆ. ಆದರೆ ಹವಾಮಾನ ಬಿಕ್ಕಟ್ಟಿನ ಸಮಸ್ಯೆಯೇ ಇಲ್ಲ ಎಂಬAತೆ ನಮ್ಮ ರಾಜಕಾರಣಿಗಳು ವರ್ತಿಸುತ್ತಿದ್ದಾರೆ. ಇತರ ವಿಷಯಗಳ ಬಗ್ಗೆ ನಾವು ಆದ್ಯತೆ ನೀಡುತ್ತಿದ್ದೇವೆ. ನಮಗೆ ಈಗ ಎದುರಾಗಿರುವ ಹಲವು ಸಮಸ್ಯೆಗಳು ಒಂದಕ್ಕೊAದು ನಿಕಟ ಸಂಬAಧ ಹೊಂದಿವೆ ಎಂಬ ಬಗ್ಗೆ ಸಂವಹನ ಮಾಡದಿರಲು ರಾಜಕಾರಣಿಗಳು ಮತ್ತು ಮಾಧ್ಯಮದವರು ನಿರ್ಧರಿಸಿದ್ದಾರೆ. ರಾಜಕಾರಣಿಗಳು ಹವಾಮಾನ ಬಿಕ್ಕಟ್ಟನ್ನು ದೂರದ ಸಮಸ್ಯೆ ಎಂದು ಪರಿಗಣಿಸಿದ್ದಾರೆ. ಇದಕ್ಕೆ ಪಾಕಿಸ್ತಾನ ನಮ್ಮೆದುರಿಗಿನ ಸ್ಪಷ್ಟ ಉದಾಹರಣೆಯಾಗಿದೆ . ಬಿಡುವಿನ ವೇಳೆಯಲ್ಲಿ ಹವಾಮಾನ ಬಿಕ್ಕಟ್ಟಿನ ಬಗ್ಗೆ ಗಮನ ಹರಿಸುವ ಧೋರಣೆ ನಮ್ಮದಾಗಿದೆ. ಇದು ಅಸ್ತಿತ್ವವಾದದ ತುರ್ತುಸ್ಥಿತಿಯಲ್ಲ, ಒಂದು ಸಮಸ್ಯೆ ಮಾತ್ರ ಎಂಬ ವಾದ ತಪ್ಪಲ್ಲ. ಆದರೆ ಇದು(ಹವಾಮಾನ ಬಿಕ್ಕಟ್ಟು) ಇತರ ಎಲ್ಲ ಸಮಸ್ಯೆಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬಾರದು ಎಂದು ಗ್ರೆಟಾ ಹೇಳಿದ್ದಾರೆ.

ಕಳೆದ ವರ್ಷ ಗ್ರೆಟಾ ಥನ್‌ಬರ್ಗ್ ಸ್ವೀಡನ್ ಸಂಸತ್‌ನ ಎದುರು ಆರಂಭಿಸಿದ್ದ ಶುಕ್ರವಾರದ ಪ್ರತಿಭಟನೆಗಳು ಹವಾಮಾನ ಬದಲಾವಣೆ ಸಮಸ್ಯೆ ನಿವಾರಣೆಗೆ ಆಗ್ರಹಿಸುವ ಜಾಗತಿಕ ಯುವ ಆಂದೋಲನವಾಗಿ ಮಾರ್ಪಟ್ಟಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News