ಚಂಡಮಾರುತ ಅಬ್ಬರಕ್ಕೆ ಕಂಗೆಟ್ಟ ದಕ್ಷಿಣ ಕೊರಿಯಾ

Update: 2022-09-06 18:03 GMT

sಸಿಯೋಲ್, ಸೆ.೬: ಭಾರೀ ಮಳೆ ಮತ್ತು ಸುಂಟರಗಾಳಿ ಸಹಿತ ಹಿನ್ನಮ್ನೋರ್ ತೂಫಾನು ದಕ್ಷಿಣ ಕೊರಿಯಾದ ದಕ್ಷಿಣ ಪ್ರಾಂತಕ್ಕೆ ಮಂಗಳವಾರ ಅಪ್ಪಳಿಸಿದ್ದು ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಚಂಡಮಾರುತದಿAದ ಹಲವು ಮರಗಳು ಧರೆಗುರುಳಿದ್ದು ೨೦,೦೦೦ಕ್ಕೂ ಅಧಿಕ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಆಂತರಿಕ ಮತ್ತು ಸುರಕ್ಷತೆ  ಸಚಿವಾಲಯ ಮಾಹಿತಿ ನೀಡಿದೆ.

ದಕ್ಷಿಣದ ಉಲ್ಸಾನ್ ನಗರದಲ್ಲಿ ೨೫ ವರ್ಷದ ವ್ಯಕ್ತಿಯೊಬ್ಬ ನೆರೆನೀರಿನಿಂದ ಉಕ್ಕಿ ಹರಿಯುತ್ತಿದ್ದ ಹೊಳೆಗೆ ಕಾಲುಜಾರಿ ಬಿದ್ದು ಕೊಚ್ಚಿಕೊಂಡು ಹೋಗಿದ್ದು ಆತನ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ. ಸಮೀಪದ ಪೊಹಾಂಗ್ ನಗರದಲ್ಲಿರುವ ಪೋಸ್ಕೋ ಉಕ್ಕು ಸ್ಥಾವರದಲ್ಲಿ ಅಗ್ನಿದುರಂತ ಸಂಭವಿಸಿದ್ದು ಅಗ್ನಿಶಾಮಕ ಪಡೆ ಬೆಂಕಿಯನ್ನು ನಿಯಂತ್ರಿಸುವ ಕಾರ್ಯದಲ್ಲಿದೆ.

ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಪ್ರಬಲ ಮತ್ತು ವಿನಾಶಕಾರಿ ಚಂಡಮಾರುತ ಇದಾಗಿದ್ದು ಹಲವೆಡೆ ಭೂಕುಸಿತ,  ಪ್ರವಾಹ ಉಂಟಾಗಿದ್ದು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಸಮುದ್ರದಲ್ಲಿ ಬೃಹದಾಕಾರದ ಅಲೆಗಳು ಎದ್ದಿದ್ದು, ಗಂಟೆಗೆ ೧೪೪ ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ  ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕೆಲ ವಾರಗಳ ಹಿಂದೆ ಸಿಯೋಲ್ ಹಾಗೂ ಅಕ್ಕಪಕ್ಕದ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆ ಮತ್ತು ಪ್ರವಾಹದಿಂದ ಕನಿಷ್ಟ ೧೪ ಮಂದಿ ಮೃತಪಟ್ಟಿದ್ದರು.

ದಕ್ಷಿಣ ವಲಯದಲ್ಲಿ ೩,೪೦೦ಕ್ಕೂ ಅಧಿಕ ಮಂದಿಯನ್ನು ಮನೆಯಿಂದ ಸ್ಥಳಾಂತರಿಸಲಾಗಿದ್ದು, ಇನ್ನೂ ೧೪,೦೦೦ ಜನರನ್ನು ಸ್ಥಳಾಂತರಗೊಳ್ಳುವAತೆ ಸೂಚಿಸಲಾಗಿದೆ. ಕನಿಷ್ಟ ೫ ಮನೆಗಳಿಗೆ ಹಾನಿಯಾಗಿದ್ದು ಹಲವು ರಸ್ತೆಗಳು ನಾಶಗೊಂಡಿವೆ. ದೇಶದಾದ್ಯಂತ ೬೦೦ಕ್ಕೂ ಅಧಿಕ ಶಾಲೆಗಳನ್ನು ಮುಚ್ಚಲಾಗಿದ್ದು ೨೫೦ಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ೬೬,೦೦೦ ಮೀನುಗಾರಿಕಾ ದೋಣಿಗಳನ್ನು ಬಂದರಿಗೆ ಸ್ಥಳಾಂತರಿಸಲಾಗಿದೆ. ಪ್ರವಾಹದ ಅಪಾಯ ಎದುರಿಸುತ್ತಿರುವ ಪ್ರದೇಶದ ಜನತೆ ಸ್ವಯಂಪ್ರೇರಿತವಾಗಿ ಸ್ಥಳಾಂತರಗೊಳ್ಳುವAತೆ ಪ್ರಧಾನಿ ಹ್ಯಾನ್ ಡೂಕ್‌ಸೂ ಜನತೆಗೆ ಕರೆ ನೀಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News