×
Ad

ಕಲ್ಲಿದ್ದಲು ಹಗರಣ: ಪಶ್ಚಿಮ ಬಂಗಾಳದ ಕಾನೂನು ಸಚಿವರ ನಿವಾಸಗಳಿಗೆ ಸಿಬಿಐ ದಾಳಿ

Update: 2022-09-07 11:16 IST
Photo:twitter

ಹೊಸದಿಲ್ಲಿ: ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪದ ಕುರಿತು ವಿರೋಧ ಪಕ್ಷಗಳು ದೇಶಾದ್ಯಂತ ಕೋಲಾಹಲ ಎಬ್ಬಿಸುತ್ತಿರುವ ನಡುವೆಯೇ  ಕಲ್ಲಿದ್ದಲು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (CBI Raids)ಇಂದು ಪಶ್ಚಿಮ ಬಂಗಾಳದ ಸಚಿವ ಮೊಲೊಯ್ ಘಾಟಕ್ ( West Bengal Minister Moloy Ghatak)ಅವರ ನಿವಾಸಕ್ಕೆ ದಾಳಿ ನಡೆಸಿ  ಶೋಧ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಪಶ್ಚಿಮ ಬರ್ಧಮಾನ್ ಜಿಲ್ಲೆಯ ಅಸನ್ಸೋಲ್‌ನಲ್ಲಿರುವ ಘಾಟಕ್‌ ಅವರಿಗೆ ಸೇರಿರುವ  ಮೂರು ಮನೆಗಳು ಹಾಗೂ  ಕೋಲ್ಕತ್ತಾದ ಲೇಕ್ ಗಾರ್ಡನ್ಸ್ ಪ್ರದೇಶದಲ್ಲಿರುವ ಒಂದು ನಿವಾಸದ ಮೇಲೆ ದಾಳಿ ನಡೆಸಿದರು.

ಕಲ್ಲಿದ್ದಲು ಕಳ್ಳಸಾಗಣೆ ಹಗರಣದ ಕುರಿತು ಸಿಬಿಐ ತನಿಖೆ ನಡೆಸುತ್ತಿದ್ದು, ತನಿಖೆಯ ವೇಳೆ ಘಾಟಕ್ ಅವರ ಹೆಸರು ಕೇಳಿ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News