3 ವಾರಗಳಲ್ಲಿ ಐಟಿ ಕಾಯ್ದೆ ಸೆಕ್ಷನ್ 66A ಪ್ರಕರಣಗಳನ್ನು ಹಿಂಪಡೆಯುವಂತೆ ಸುಪ್ರೀಂಕೋರ್ಟ್ ಆದೇಶ

Update: 2022-09-07 08:12 GMT

ಹೊಸದಿಲ್ಲಿ: ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಎ ಅಡಿಯಲ್ಲಿ (Section 66A of the Information Technology Act)ಇನ್ನೂ ಪ್ರಕರಣಗಳನ್ನು ದಾಖಲಿಸಲಾಗುತ್ತಿರುವುದು ಗಂಭೀರ ಕಳವಳಕಾರಿ ಸಂಗತಿಯಾಗಿದೆ ಎಂದು ಸಿಜೆಐ ಯು.ಯು. ಲಲಿತ್ ( CJI UU Lalit) ನೇತೃತ್ವದ ಸುಪ್ರೀಂಕೋರ್ಟ್ ಪೀಠ ಮಂಗಳವಾರ  ಆತಂಕವ್ಯಕ್ತಪಡಿಸಿದೆ.

ಅಂತಹ ಪ್ರಕರಣಗಳನ್ನು ಮೂರು ವಾರಗಳಲ್ಲಿ ಹಿಂತೆಗೆದುಕೊಳ್ಳುವಂತೆ ಅದು ಸಂಬಂಧಪಟ್ಟ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಆದೇಶಿಸಿದೆ.

ಚಿಂತನೆ ಹಾಗೂ ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು "ಕಾರ್ಡಿನಲ್" ಎಂದು ಪರಿಗಣಿಸಿ, ಉನ್ನತ ನ್ಯಾಯಾಲಯವು 2015 ರಲ್ಲಿ ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡುವ ವ್ಯಕ್ತಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ  ದಂಡವನ್ನು ವಿಧಿಸಬಹುದಾದ ಸೆಕ್ಷನ್ ಅನ್ನು ತೆಗೆದುಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News