ದಿಲ್ಲಿ ಲೆಫ್ಟಿನೆಂಟ್‌ ಗವರ್ನರ್ ಕಳುಹಿಸಿದ ಮಾನನಷ್ಟ ನೋಟಿಸ್‌ ಹರಿದು ಹಾಕಿದ ಎಎಪಿ ಸಂಸದ

Update: 2022-09-07 10:22 GMT

ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ 'ಖಾದಿ ಹಗರಣ'ದ ಬಗ್ಗೆ ಆರೋಪ ಮಾಡಿದ್ದಕ್ಕಾಗಿ ತನ್ನ ವಿರುದ್ಧ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಕಳುಹಿಸಿದ ಮಾನನಷ್ಟ ನೋಟಿಸ್‌ ಅನ್ನು ಹರಿದು ಹಾಕಿ ಆಕೋಶ ವ್ಯಕ್ತಪಡಿಸಿದ್ದಾರೆ.

"ಭಾರತದ ಸಂವಿಧಾನವು ನನಗೆ ಸತ್ಯವನ್ನು ಮಾತನಾಡುವ ಹಕ್ಕನ್ನು ನೀಡಿದೆ" ಎಂದು ಸಂಜಯ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು, "ರಾಜ್ಯಸಭೆಯ ಸದಸ್ಯನಾಗಿ ನನಗೆ ಸತ್ಯವನ್ನು ಮಾತನಾಡುವ ಹಕ್ಕಿದೆ. ಕಳ್ಳ, ಭ್ರಷ್ಟರು ಕಳುಹಿಸಿರುವ ಈ ನೋಟಿಸ್‌ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ” ಎಂದು ಹೇಳಿ ಬಳಿಕ ಅದನ್ನು ಅವರು ಹರಿದು ಬಿಸಾಡಿದ್ದಾರೆ. 

ಲೆಫ್ಟಿನೆಂಟ್ ಗವರ್ನರ್ ಸಿಬಿಐ ತನಿಖೆಗೆ ಆದೇಶ ನೀಡಿದ್ದರಿಂದ, ಖಾಸಗಿ ಕಂಪನಿಗಳಿಗೆ ಮದ್ಯದ ವ್ಯಾಪಾರವನ್ನು ಪ್ರವೇಶಿಸಲು ದಾರಿ ಮಾಡಿಕೊಡುವ ಹೊಸ ಅಬಕಾರಿ ನೀತಿಯನ್ನು ಜುಲೈನಲ್ಲಿ ಎಎಪಿ ಸರ್ಕಾರವು ಹಿಂತೆಗೆದುಕೊಂಡಿತ್ತು. 

ಕೇಂದ್ರ ಸರ್ಕಾರದಿಂದ ನೇಮಕಗೊಂಡಿರುವ ಲೆಫ್ಟಿನೆಂಟ್ ಗವರ್ನರ್ ಕೇಂದ್ರದ ಆಡಳಿತಾರೂಢ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನದ ಮೇರೆಗೆ "ಸೇಡಿನ‌ ರಾಜಕೀಯ" ಮಾಡುತ್ತಿದ್ದಾರೆ ಎಂದು ಎಎಪಿ ಹೇಳಿದೆ.

2015 ರಿಂದ 2022ರ ಆರಂಭದವರೆಗೆ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಅಧ್ಯಕ್ಷರಾಗಿದ್ದಾಗ ಸಕ್ಸೇನಾ ಹಲವಾರು ಅಕ್ರಮಗಳನ್ನು ಎಸಗಿದ್ದಾರೆ ಎಎಪಿ ಆರೋಪಿಸಿದೆ. ಎಎಪಿ ಶಾಸಕ ದುರ್ಗೇಶ್ ಪಾಠಕ್ ಅವರು ಕೆವಿಐಸಿ ನೌಕರರ ಮೇಲೆ ಮೌಲ್ಯದ ನೋಟುಗಳನ್ನು ಬದಲಾಯಿಸುವಂತೆ ಒತ್ತಡ ಹೇರಿದ್ದರು ಎಂದು ಹೇಳಿದರು. 2016 ರಲ್ಲಿ 1400 ಕೋಟಿ ರೂ. ಜೊತೆಗೆ, ಅವರು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡರು ಮತ್ತು ಮುಂಬೈನಲ್ಲಿ ಖಾದಿ ಲಾಂಜ್‌ನ ಒಳಾಂಗಣ ವಿನ್ಯಾಸದ ಗುತ್ತಿಗೆಯನ್ನು ತಮ್ಮ ಮಗಳಿಗೆ ನೀಡಿದರು ಎಂದು ಎಎಪಿ ಹೇಳಿದೆ.

ಈ ಸಂದರ್ಭದಲ್ಲಿ, ಸಕ್ಸೇನಾ ಅವರು ಮಾನನಷ್ಟವಾಗುವಂತೆ ಆರೋಪ ಮಾಡಿದ್ದಾರೆ ಎಂದು ಪ್ರತ್ಯಾರೋಪ ಮಾಡಿ ಸೋಮವಾರ ಎಎಪಿಯ ಸಂಜಯ್ ಸಿಂಗ್ ಮತ್ತು ದುರ್ಗೇಶ್ ಪಾಠಕ್, ಅತಿಶಿ, ಸೌರಭ್ ಭಾರದ್ವಾಜ್ ಮತ್ತು ಜಾಸ್ಮಿನ್ ಶಾ ಅವರಿಗೆ "ಅವಹೇಳನಕಾರಿ, ದುರುದ್ದೇಶಪೂರಿತ" ಆರೋಪಗಳಿಗಾಗಿ ಲೀಗಲ್ ನೋಟಿಸ್ ಕಳುಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News