ಬಾಂಗ್ಲಾ ಪ್ರಧಾನಿ ಭಾರತ ಪ್ರವಾಸದಲ್ಲಿರುವಾಗಲೇ ವಿವಾದಾತ್ಮಕ ಹೇಳಿಕೆ ನೀಡಿದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ

Update: 2022-09-07 10:46 GMT

ಹೊಸದಿಲ್ಲಿ: ನೆರೆಯ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ (Bangladesh Prime Minister Sheikh Hasina)ಅವರು ಭಾರತಕ್ಕೆ ರಾಜತಾಂತ್ರಿಕ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ(Himanta Sarma) ಅವರು ಬಾಂಗ್ಲಾದೇಶವನ್ನು ಏಕೀಕರಣಗೊಳಿಸುವ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರಾಹುಲ್ ಗಾಂಧಿ ಹಾಗೂ  ಇತರ ಕಾಂಗ್ರೆಸ್ ನಾಯಕರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 3,500 ಕಿ.ಮೀ ವರೆಗೆ ಪ್ರಯಾಣಿಸಲಿರುವ ಕಾಂಗ್ರೆಸ್‌ನ 'ಭಾರತ್ ಜೋಡೋ ಯಾತ್ರೆ' ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಶರ್ಮಾ ಪ್ರತಿಕ್ರಿಯಿಸಿದರು.

"ಭಾರತ ಅಖಂಡವಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಸಿಲ್ಚಾರ್‌ನಿಂದ ಸೌರಾಷ್ಟ್ರದವರೆಗೆ ನಾವು ಒಂದಾಗಿದ್ದೇವೆ. ಕಾಂಗ್ರೆಸ್ ದೇಶವನ್ನು ಭಾರತ ಹಾಗೂ  ಪಾಕಿಸ್ತಾನ ಎಂದು ವಿಭಜಿಸಿತು. ನಂತರ ಬಾಂಗ್ಲಾದೇಶವನ್ನು ರಚಿಸಲಾಯಿತು. ಪಂಡಿತ್ ಜವಾಹರಲಾಲ್ ನೆಹರು ಅವರು ತಪ್ಪುಗಳನ್ನು ಮಾಡಿದ್ದಾರೆ. ಆ ತಪ್ಪು ಆಗಬಾರದಿತ್ತು ಎಂದು ರಾಹುಲ್ ಗಾಂಧಿಗೆ  ಅನಿಸಿದರೆ ಅದಕ್ಕೆ ಕ್ಷಮೆಯಾಚಿಸಿದರೆ, ವಿಷಾದ ವ್ಯಕ್ತಪಡಿಸಿದರೆ ಭಾರತದ ಭೂಪ್ರದೇಶದಲ್ಲಿ 'ಭಾರತ್ ಜೋಡೋ' ಯಾವುದೇ ಅರ್ಥವಿಲ್ಲ. ದೇಶ ವಿಭಜನೆಯಾದ ಬಗ್ಗೆ ವಿಷಾದವಿದ್ದರೆ ಪಾಕಿಸ್ತಾನ, ಬಾಂಗ್ಲಾದೇಶವನ್ನು ಸಂಯೋಜಿಸಲು ಪ್ರಯತ್ನಿಸಿ ಹಾಗೂ  ಅಖಂಡ ಭಾರತವನ್ನು ರಚಿಸಲು ಶ್ರಮಿಸಿ"ಎಂದು 2015 ರಲ್ಲಿ ಬಿಜೆಪಿಗೆ ಸೇರಿದ ಮಾಜಿ ಕಾಂಗ್ರೆಸ್ ನಾಯಕ ಶರ್ಮಾ ಹೇಳಿರುವ ವೀಡಿಯೊವನ್ನು ಸುದ್ದಿ ಸಂಸ್ಥೆ ANI ಟ್ವೀಟ್ ಮಾಡಿದೆ.

'ಅಖಂಡ ಭಾರತ' ಎಂಬುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಂದು ಕಲ್ಪನೆಯಾಗಿದೆ.  ಇದರ ಅಡಿಯಲ್ಲಿ "ಅವಿಭಜಿತ ಭಾರತ" ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಭೂತಾನ್, ಅಫ್ಘಾನಿಸ್ತಾನ, ಟಿಬೆಟ್ ಹಾಗೂ  ಮ್ಯಾನ್ಮಾರ್ ಅನ್ನು ಒಳಗೊಂಡಿದೆ.

ಶೇಖ್ ಹಸೀನಾ ಅವರು ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವಾಗ "ಬಾಂಗ್ಲಾದೇಶವನ್ನು ಭಾರತದೊಂದಿಗೆ ಏಕೀಕರಿಸಬೇಕು" ಎಂಬ ಕುರಿತು ಅಸ್ಸಾಂ ಮುಖ್ಯಮಂತ್ರಿಯವರ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಬಾಂಗ್ಲಾದೇಶದ ಪ್ರಧಾನಿ ಜೊತೆಗೆ ದ್ವಿಪಕ್ಷೀಯ ಬಾಂಧವ್ಯವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಮಾತುಕತೆ ನಡೆಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News