NEET ಫಲಿತಾಂಶ ಪ್ರಕಟ: ರಾಜಸ್ಥಾನದ ತನಿಷ್ಕಾಗೆ ಪ್ರಥಮ ಸ್ಥಾನ, ಕರ್ನಾಟಕದ ಹೃಷಿಕೇಶ್‌ಗೆ ಮೂರನೇ ಸ್ಥಾನ

Update: 2022-09-07 18:29 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ(ಎನ್‌ಟಿಎ) ಬುಧವಾರ ರಾಷ್ಟ್ರೀಯ ಅರ್ಹತಾ, ಪ್ರವೇಶ ಪರೀಕ್ಷೆ(ನೀಟ್-ಯುಜಿ)2022ರ ಫಲಿತಾಂಶವನ್ನು ಪ್ರಕಟಿಸಿದೆ.

ರಾಜಸ್ಥಾನದ ತನಿಷ್ಕಾ ಪ್ರಥಮ ಸ್ಥಾನ, ದಿಲ್ಲಿಯ ವಸ್ತ ಆಶೀಶ್ ಬಾತ್ರಾ ದ್ವಿತೀಯ ಹಾಗೂ ಕರ್ನಾಟಕದ ಹೃಷಿಕೇಶ್ ನಾಗಭೂಷಣ ಗಂಗುಲೆ ಅವರು ಮೂರನೇ ಸ್ಥಾನ ಪಡೆದಿದ್ದಾರೆ.

► NEET UG 2022 ಫಲಿತಾಂಶ ಡೌನ್‌ ಲೋಡ್‌ ಮಾಡುವ ವಿಧಾನ ಹೇಗೆ?

ನೀಟ್‌ ಅಧಿಕೃತ ವೆಬ್‌ಸೈಟ್‌ neet.nta.nic.in ಅಥವಾ ntaresults.nic.in ಗೆ ಭೇಟಿ ನೀಡಿ.

ಮುಖಪುಟದಲ್ಲಿ “NEET UG – 2022 Result 2022” ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.

ನಂತರ ನಿಮ್ಮ ಲಾಗಿನ್‌ ಐಡಿ, ಜನ್ಮ ದಿನಾಂಕ, ನೋಂದಣಿ ಸಂಖ್ಯೆಯನ್ನು ನಮೂದಿಸಿ. ಆಗ ನಿಮಗೆ ನೀಟ್‌ ಯುಜಿ ಫಲಿತಾಂಶ ಪರದೆಯ ಮೇಲೆ ಕಾಣಿಸುತ್ತದೆ.

ಅದನ್ನು ಡೌನ್‌ಲೋಡ್‌ ಮಾಡಿಕೋಂಡು, ಪ್ರಿಂಟ್‌ ತೆಗೆದುಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News