ಏಶ್ಯಕಪ್: ಬ್ಯಾಟ್ ಎತ್ತಿ ಅಫ್ಘಾನ್ ಬೌಲರ್ ಗೆ ಹಲ್ಲೆ ನಡೆಸಲು ಮುಂದಾದ ಪಾಕ್ ಬ್ಯಾಟರ್ ಅಸಿಫ್ ಅಲಿ

Update: 2022-09-08 07:06 GMT
Photo:AP

ಶಾರ್ಜಾ: ಶಾರ್ಜಾ ಕ್ರಿಕೆಟ್ ಅಸೋಸಿಯೇಶನ್ ​​ಸ್ಟೇಡಿಯಂನಲ್ಲಿ ಬುಧವಾರ ನಡೆದ ರೋಚಕ ಸೂಪರ್-4 ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಒಂದು ವಿಕೆಟ್‌ನಿಂದ ಸೋಲಿಸಿದ ಪಾಕಿಸ್ತಾನ ಏಶ್ಯಕಪ್ ಫೈನಲ್‌ಗೆ ಅರ್ಹತೆ ಪಡೆಯಿತು. 

ಪಂದ್ಯದ 19 ನೇ ಓವರ್‌ನ ಐದನೇ ಎಸೆತದಲ್ಲಿ  ಪಾಕಿಸ್ತಾನದ ಬ್ಯಾಟರ್ ಆಸಿಫ್ ಅಲಿ ಅಫ್ಘಾನ್ ಬೌಲರ್ ಫರೀದ್ ಅಹ್ಮದ್ ಮಲಿಕ್ ಮೇಲೆ ಬ್ಯಾಟ್ ಎತ್ತಿ ಹಲ್ಲೆ ನಡೆಸಲು ಮುಂದಾಗಿದ್ದು, ಇದಕ್ಕೆ ಪ್ರತಿಯಾಗಿ ಮಲಿಕ್ ಅವರು ಅಲಿಯ ಭುಜಕ್ಕೆ ತನ್ನ ಭುಜವನ್ನು ಗುದ್ದಿ ಹೊಡೆದಾಡಲು ಮುಂದಾದ ಅಹಿತಕರ ಘಟನೆಯೂ ನಡೆದಿದೆ.

ಮಲಿಕ್ ಎಸೆದ 19ನೇ ಓವರ್ ನ 4ನೇ ಎಸೆತವನ್ನು ಅಲಿ ಸಿಕ್ಸರ್ ಗೆ ಅಟ್ಟಿದರು. 5ನೇ  ಎಸೆತದಲ್ಲಿ ಮಲಿಕ್ ಗೆ ವಿಕೆಟ್ ಒಪ್ಪಿಸಿದರು. ಮಲಿಕ್ ಅವರು  ಆಸಿಫ್ ಅವರನ್ನು ಔಟ್ ಮಾಡಿದ್ದು ಮಾತ್ರವಲ್ಲದೆ, ಬ್ಯಾಟರ್ ನತ್ತ ತೆರಳಿ ವಿಕೆಟ್ ಪಡೆದ ಸಂಭ್ರಮ ಆಚರಿಸಿದರು. ಆದರೆ, ಆಸಿಫ್ ಗೆ  ಮಲಿಕ್ ವರ್ತನೆ ಇಷ್ಟವಾಗಲಿಲ್ಲ ಆಗ ಅಲಿ ತನ್ನ ಬ್ಯಾಟ್ ಅನ್ನು ಮೇಲಕ್ಕೆತ್ತಿ ಹೊಡೆಯಲು ಮುಂದಾದರು. ನಂತರ  ಮುಂದೆ ಸಾಗಿದರು. ಬ್ಯಾಟರ್ ಹಿಂತಿರುಗಿ ಹೋಗುತ್ತಿದ್ದಾಗ ಮಲಿಕ್ ಅವರು  ಆಸಿಫ್ ಭುಜಕ್ಕೆ ತನ್ನ ಭುಜ ತಗಲಿಸಿದರು. ಆಗ ಅಫ್ಘಾನ್ ಆಟಗಾರರು ಮಧ್ಯಪ್ರವೇಶಿಸಿ ಇಬ್ಬರು ಆಟಗಾರರನು ಬೇರ್ಪಡಿಸಿದರು..

ಬುಧವಾರ  130 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನಕ್ಕೆ ಅಂತಿಮ ಓವರ್‌ನಲ್ಲಿ 11 ರನ್‌ಗಳ ಅಗತ್ಯವಿತ್ತು.ಬೌಲರ್ ಗಳಾದ  ನಸೀಮ್ ಷಾ ಹಾಗೂ ಮತ್ತು ಮೊಹಮ್ಮದ್ ಹಸ್ನೈನ್ ಕ್ರೀಸ್ ನಲ್ಲಿದ್ದರು. ಅಫ್ಘಾನಿಸ್ತಾನವು ಪಾಕಿಸ್ತಾನವನ್ನು ಸೋಲಿಸಬಹುದು ಎಂಬ ಪರಿಸ್ಥಿತಿ ಇದ್ದಾಗ , ನಸೀಮ್‌ ಕೊನೆಯ ಓವರ್ ಎಸೆದ ಅಫ್ಘಾನ್  ವೇಗಿ ಫಾರೂಕಿ ಅವರ ಮೊದಲ ಎರಡು ಎಸೆತಗಳಲ್ಲಿ ಎರಡು ಸಿಕ್ಸರ್‌ಗಳನ್ನು ಸಿಡಿಸಿ ಗೆಲುವು ತಂದರು, ಆಗ ಪಾಕಿಸ್ತಾನದ ಡ್ರೆಸ್ಸಿಂಗ್ ಕೋಣೆಯಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News