ಖಾರ್ಕಿವ್ ಪ್ರಾಂತದ ಕೆಲವು ಪ್ರದೇಶಗಳನ್ನು ಮರುವಶಪಡಿಸಿಗೊಂಡ ಉಕ್ರೇನ್‌

Update: 2022-09-09 06:49 GMT

   ಕೀವ್,ಸೆ.8: ರಶ್ಯ ಸೇನೆಯ ವಶದಲ್ಲಿರು ಈಶಾನ್ಯ ಖಾರ್ಕಿವ್ ಪ್ರಾಂತದ ಕೆಲವು ಭಾಗಗಳನ್ನು ಉಕ್ರೇನ್ ಪಡೆಗಳು ಮರುವಶಪಡಿಸಿಕೊಂಡಿವೆ. ದಕ್ಷಿಣ ಉಕ್ರೇನ್‌ನಲ್ಲಿ ನಡೆಯುತ್ತಿರುವ ಭೀಕರ ಕದನವು ರಶ್ಯದ ಸಂಪನ್ಮೂಲಗಳನ್ನು ಕರಗಿಸುತ್ತಿರುವಂತೆಯೇ ಉಕ್ರೇನ್ ಖಾರ್ಕಿವ್‌ನಲ್ಲಿ ಮುನ್ನಡೆಯನ್ನು ಸಾಧಿಸಿವೆ ಎಂದು ಅಮೆರಿಕ ಮೂಲದ ಚಿಂತನಾ ಸಂಸ್ಥೆ ‘ಸ್ಟಡಿ ಆಫ್ ವಾರ್’ ವರದಿ ಮಾಡಿದೆ.

       ರಶ್ಯ ತನ್ನ ಪಡೆಗಳನ್ನು ಖಾರ್ಕಿವ್‌ನಿಂದ ಸ್ಥಳಾಂತರಿಸಿ ದಕ್ಷಿಣ ಉಕ್ರೇನ್‌ನಲ್ಲಿ ತಾನು ಅಕ್ರಮಿಸಿರುವ ಖೆರ್ಸನ್ ನಗರದ ಸಮೀಪ ಭಾರೀ ಸಂಖ್ಯೆಯಲ್ಲಿ ನಿಯೋಜಿಸಿತ್ತು. ಇದನ್ನು ಸದವಕಾಶವಾಗಿ ಬಳಸಿಕೊಂಡ ಉಕ್ರೇನ್ ಸೇನೆ ಪ್ರತಿದಾಳಿ ನಡೆಸಿ ಖಾರ್ಕಿವ್ ಪ್ರಾಂತಲ್ಲಿ ದಾಳಿ ನಡೆಸಿ, 155 ಚದರ ಕಿ.ಮೀ. ಭೂಭಾಗವನ್ನು ಮರುವಶಪಡಿಸಿಕೊಂಡಿದೆ ಎಂದು ವರದಿ ತಿಳಿಸಿದೆ.

   ಖಾರ್ಕಿವ್ ಪ್ರಾಂತದಲ್ಲಿ ಉಕ್ರೇನ್ ಪಡೆಗಳು ನಿರಂತರವಾಗಿ ಶೆಲ್ ದಾಳಿ ನಡೆಸುತ್ತಿರುವುದರಿಂದ ರಶ್ಯ ಸ್ವಾಧೀನ ಪ್ರದೇಶದಲ್ಲಿರುವ ಕುಪಿಯಾನ್‌ಸ್ಕ್ ನಗರ ಹಾಗೂ ಆಸುಪಾಸಿನ ಪ್ರದೇಶಗಳಿಂದ ಮಹಿಳೆಯರು ಹಾಗೂ ಮಕ್ಕಳನ್ನು ಮೇಯರ್ ವಿಟಾಲಿ ಗುನಾಚೆವ್ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News