ತನ್ನ ಕಾರ್ಯವೈಖರಿ ಕುರಿತ ರಹಸ್ಯ ಬಿಚ್ಚಿಟ್ಟ ವ್ಯಕ್ತಿಗೆ 7 ಮಿಲಿಯನ್ ಡಾಲರ್ ನೀಡಿದ್ದ ಟ್ವಿಟರ್ !

Update: 2022-09-09 05:10 GMT

ವಾಷಿಂಗ್ಟನ್: ತನ್ನ ಕಾರ್ಯವೈಖರಿ ಕುರಿತ ರಹಸ್ಯ ಬಿಚ್ಚಿಟ್ಟ ವ್ಯಕ್ತಿಗೆ ಟ್ವಿಟರ್ 7 ಮಿಲಿಯನ್ ಡಾಲರ್ ನೀಡಿರುವುದಾಗಿ ಎಲಾನ್ ಮಸ್ಕ್ ಅವರ ವಕೀಲರು ಹೇಳಿದ್ದಾರೆ.

ವಿಶ್ವದ ಜನಪ್ರಿಯ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನ ಕಾರ್ಯಾಚರಣೆ ಸಮಸ್ಯೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದ ವಿಷ್ಲ್ ಬ್ಲೋವರ್‌ whistle-blower (ರಹಸ್ಯ ಸ್ಫೋಟಿಸುವ ವ್ಯಕ್ತಿ) ಸುಮ್ಮನಿರಿಸುವ ಸಲುವಾಗಿ ಟ್ವಿಟ್ಟರ್ 7 ಮಿಲಿಯನ್ ಡಾಲರ್ ಪಾವತಿ ಮಾಡಿದೆ ಎಂದು ಎಲಾನ್ ಮಸ್ಕ್ ಅವರ ವಕೀಲರು ಹೇಳಿದ್ದಾರೆ.

ಟ್ವಿಟ್ಟರ್ ಮತ್ತು ಮಸ್ಕ್ ನಡುವಿನ ಕಾನೂನು ವ್ಯಾಜ್ಯದ ವಿಚಾರಣೆ ವೇಳೆ ಸೆಪ್ಟೆಂಬರ್ 6ರಂದು ಈ ಅಂಶವನ್ನು ಬಹಿರಂಗಪಡಿಸಿದ್ದಾರೆ. 44 ಶತಕೋಟಿ ಡಾಲರ್ ವೆಚ್ಚದಲ್ಲಿ ಟ್ವಿಟ್ಟರ್ ಖರೀದಿಸುವ ಪ್ರಯತ್ನದಿಂದ ಹಿಂದೆ ಸರಿಯುವ ಮಸ್ಕ್ ನಿರ್ಧಾರವನ್ನು ಪ್ರಶ್ನಿಸಿ ಟ್ವಿಟ್ಟರ್ ದಾವೆ ಹೂಡಿದೆ.

"ವಿಷ್ಲ್ ಬ್ಲೋವರ್‌ ನ ಬಾಯಿ ಮುಚ್ಚಿಸುವ ಸಲುವಾಗಿ ಅವರು 7 ಮಿಲಿಯನ್ ಡಾಲರ್ ನೀಡಿದ್ದಾರೆ" ಎಂದು ಮಸ್ಕ್ ಅವರ ವಕೀಲ ಅಲೆಕ್ಸ್ ಸ್ಪೈರೊ ವಿಚಾರಣೆ ವೇಳೆ ಹೇಳಿದರು. ಪೀಟರ್ ಝಡ್ಕೊ ಎಂಬ ವ್ಯಕ್ತಿಗೆ ಈ ಪಾವತಿ ಮಾಡಿರುವುದನ್ನು ಮೂಲಗಳು ದೃಢಪಡಿಸಿವೆ.

ಕಂಪನಿಯ ಭದ್ರತಾ ವಿಭಾಗದ ಮಾಜಿ ಮುಖ್ಯಸ್ಥರಿಗೆ ಪಾವತಿ ಮಾಡಿರುವ ಬಗ್ಗೆ ಸ್ಪಷ್ಟನೆ ನೀಡಲು ಟ್ವಿಟ್ಟರ್ ಪ್ರತಿನಿಧಿಗಳು ನಿರಾಕರಿಸಿದ್ದಾರೆ, ಟ್ವಿಟ್ಟರ್ ತ್ಯಜಿಸಿದ ಬಳಿಕ ಝೆಟ್ಕೊಗೆ ಪಾವತಿಸಬೇಕಾದ ಪರಿಹಾರ ಮೊತ್ತದ ಭಾಗವಾಗಿ ಇದನ್ನು ಪಾವತಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವಾಲ್‍ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಈ ಒಪ್ಪಂದದ ಕಾರಣದಿಂದಾಗಿ ಝೆಟ್ಕೊ ಬಹಿರಂಗವಾಗಿ ಮಾತನಾಡದಂತೆ ಮಾಡಿತು ಎಂದು ವಿವರಿಸಿದೆ. ಈ ಬಗ್ಗೆ hindustantimes.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News