ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಬಿಡುಗಡೆ: ನ್ಯಾಯದ ಕುರಿತ ವೈಯಕ್ತಿಕ ಭಾವನೆಗೆ ದ್ರೋಹವಾಗಿದೆ ಎಂದ ಬಿಜೆಪಿ ನಾಯಕಿ

Update: 2022-09-10 12:26 GMT

 ಹೊಸದಿಲ್ಲಿ,ಸೆ.10: 'ನ್ಯಾಯದ ಕುರಿತು ನನ್ನ ವ್ಯಕ್ತಿಗತ ಭಾವನೆಗೆ ದ್ರೋಹವಾಗಿದೆ 'ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರರಾದ ಶಾಝಿಯಾ ಇಲ್ಮಿ(Shazia Ilmi) ಅವರು ಅವಧಿಗೆ ಮುನ್ನವೇ ಬಿಲ್ಕಿಸ್ ಬಾನು ಪ್ರಕರಣದ(Bilkis Bano) 11 ಅಪರಾಧಿಗಳ ಬಿಡುಗಡೆಯ ಕುರಿತು ಬರೆದಿರುವ ಲೇಖನವೊಂದರಲ್ಲಿ ಹೇಳಿದ್ದಾರೆ.

 ದೇಶದ ಸಾಮೂಹಿಕ ಆತ್ಮಸಾಕ್ಷಿಯು ಗೆಲ್ಲಬೇಕು ಎಂದು ಬರೆದಿರುವ ಇಲ್ಮಿ,ಅಪರಾಧಿಗಳಿಗೆ ಕ್ಷಮಾದಾನವು ಗುಜರಾತಿನ ಬಿಜೆಪಿ ಸರಕಾರದ(Gukarat Bjp Governement) ವ್ಯಾಪ್ತಿಯಲ್ಲಿ ಬರುತ್ತದೆ ಮತ್ತು ಗುಜರಾತ್ ರಾಜ್ಯ ಸರಕಾರ ಹಾಗೂ ಪ್ರಧಾನಿ ಕಚೇರಿಯ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಮುಖ್ಯವಾಗಿದೆ ಎಂದು ಹೇಳುವ ಮೂಲಕ ಮೋದಿ ಸರಕಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಈ ನಿಟ್ಟಿನಲ್ಲಿ ಬಿಜೆಪಿ ವಿರುದ್ಧದ ಪಕ್ಷಪಾತದ ಆರೋಪಗಳನ್ನು 'ಹಾಸ್ಯಾಸ್ಪದ' ಎಂದು ಬಣ್ಣಿಸಿರುವ ಅವರು,ಅಪರಾಧಿಗಳ ಬಿಡುಗಡೆಗಾಗಿ ಸರಕಾರವು ಯಾವುದೇ ಅಭಿಯಾನವನ್ನು ನಡೆಸಿರಲಿಲ್ಲ. ಉದಾಹರಣೆಗೆ 2018ರಲ್ಲಿ ತಮಿಳುನಾಡು ಸರಕಾರವು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ(‌Rajiv Gandhi) ಹತ್ಯೆ ಪ್ರಕರಣದಲ್ಲಿ ಪೆರಾರಿವೇಲನ್ ಮತ್ತು ಇತರ ಅಪರಾಧಿಗಳ ಬಿಡುಗಡೆಗಾಗಿ ಸಂಪುಟ ನಿರ್ಣಯಗಳನ್ನು ಅಂಗೀಕರಿಸಿತ್ತು ಎಂದು ಬರೆದಿದ್ದಾರೆ.

'ಬಿಲ್ಕಿಸ್ ಬಾನು(Bilkis Bano) ಅನುಭವಿಸಿದ್ದ ಹೇಳಲಾಗದ ಸಂಕಟವನ್ನು ಮತ್ತು ಭಯಾನಕತೆಯನ್ನು ಎಷ್ಟು ಖಂಡಿಸಿದರೂ ಸಾಲದು. ಇಂತಹ ಘೋರ ಅಪರಾಧದ ತಪ್ಪಿತಸ್ಥರು ಕೇವಲ 15 ವರ್ಷಗಳಲ್ಲಿ ಪಾರಾಗಬಹುದು ಎನ್ನುವುದು ನನಗೆ ದಿಗ್ಭ್ರಮೆಯನ್ನುಂಟು ಮಾಡಿದೆ. ಈ ಬಗ್ಗೆ ಎರಡು ಅಭಿಪ್ರಾಯಗಳಿರಲು ಸಾಧ್ಯವಿಲ್ಲ ' ಎಂದು ಇಲ್ಮಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News