ಜೈಲಿನಲ್ಲಿರುವ ನವಾಲ್ನಿಗೆ ರಶ್ಯ ಕಿರುಕುಳ: ಅಮೆರಿಕ ಆರೋಪ

Update: 2022-09-10 15:43 GMT

ವಾಷಿಂಗ್ಟನ್, ಸೆ.10: ರಶ್ಯದಲ್ಲಿ ಬಂಧನದಲ್ಲಿರುವ ವಿಪಕ್ಷ ಮುಖಂಡ ಅಲೆಕ್ಸಿ ನವಾಲ್ನಿ ವಿರುದ್ಧ ಜೈಲಿನ ಅಧಿಕಾರಿಗಳು ಕೆಟ್ಟದಾಗಿ ವರ್ತಿಸುತ್ತಿದ್ದು ಅವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಅಮೆರಿಕ ಆರೋಪಿಸಿದೆ.  

‌ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಕಟು ಟೀಕಾಕಾರನಾಗಿರುವ ನವಾಲ್ನಿ 9 ವರ್ಷದ ಸೆರೆವಾಸ ಅನುಭವಿಸುತ್ತಿದ್ದಾರೆ. ಅವರನ್ನು ಏಕಾಂತ ಬಂಧನದಲ್ಲಿರಿಸಿರುವ ಜೊತೆಗೆ, ವಕೀಲರೊಂದಿಗೆ ಸಂಪರ್ಕವನ್ನೂ ನಿರ್ಬಂಧಿಸಲಾಗಿದೆ. ವಕೀಲರೊಂದಿಗೆ ನಡೆಸುವ ಮಾತುಕತೆ ತಮ್ಮ ಉಪಸ್ಥಿತಿಯಲ್ಲಿಯೇ ನಡೆಯಬೇಕು ಎಂದು ಜೈಲಿನ ಅಧಿಕಾರಿಗಳು ಸೂಚಿಸಿದ್ದಾರೆ. ಜತೆಗೆ ವಕೀಲರು ಕೋರಿದ ದಾಖಲೆಗಳನ್ನು ಒದಗಿಸುವಲ್ಲಿ ಉದ್ದೇಶಪೂರ್ವಕ ವಿಳಂಬ ಮಾಡುತ್ತಿದ್ದಾರೆ.  ನವಾಲ್ನಿಯ ಮಾನವ ಹಕ್ಕುಗಳಲ್ಲಿ ರಶ್ಯ ಅಧಿಕಾರಿಗಳ ಅನಿಯಂತ್ರಿತ ಹಸ್ತಕ್ಷೇಪ ತೀವ್ರ ಕಳವಳಕ್ಕೆ ಕಾರಣವಾಗಿದೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News