ಯುವತಿ ಮೇಲೆ ಅತ್ಯಾಚಾರ: ಆರೋಪಿ, ತಾಯಿ ವಿರುದ್ಧ ಪ್ರಕರಣ ದಾಖಲು

Update: 2022-09-12 02:50 GMT

ನಾಗ್ಪುರ: ಸಂಬಂಧದ ಆಮಿಷವೊಡ್ಡಿ ಹದಿಹರೆಯದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಮಧ್ಯಪ್ರದೇಶದ 22 ವರ್ಷದ ಯುವಕನ ವಿರುದ್ಧ ಹಾಗೂ ಮತ್ತೋರ್ವ ಪುರುಷನ ಜತೆ ಲೈಂಗಿಕ ಸಂಬಂಧಕ್ಕೆ ಒತ್ತಾಯಿಸಿದ ಆರೋಪಿಯ ತಾಯಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈವೆಂಟ್ ಮ್ಯಾನೇಜ್‍ಮೆಂಟ್ ಕಂಪನಿಯ ಭಾಗವಾಗಿ ಯುವತಿ ಕಳೆದ ಮೇ ತಿಂಗಳಲ್ಲಿ ಭೋಪಾಲ್‍ಗೆ ಹೋಗಿದ್ದರು. ಆ ಸಂದರ್ಭದಲ್ಲಿ ಅಭಿಷೇಕ್ ಕುರಿಲ್ ಎಂಬಾತನ ಭೇಟಿಯಾಗಿತ್ತು. ಆತ ಯುವತಿಗೆ ಆಮಿಷವೊಡ್ಡಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮತ್ತೊಬ್ಬ ವ್ಯಕ್ತಿಯ ಜತೆ ದೈಹಿಕ ಸಂಬಂಧಕ್ಕಾಗಿ ಯುವತಿಯನ್ನು ಒತ್ತಾಯಿಸಿದ ಆರೋಪದಲ್ಲಿ ಆರೋಪಿಯ ತಾಯಿ ರಜನಿ (45) ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಯುವತಿಯ ಮೊಬೈಲ್ ಕಸಿದುಕೊಂಡು ಆಕೆಯ ಅಶ್ಲೀಲ ಚಿತ್ರಗಳನ್ನು ಆರೋಪಿ ಸಾಮಾಜಿ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಎನ್ನಲಾಗಿದೆ.

ಅತ್ಯಾಚಾರ, ಅಪರಾಧ ಬೆದರಿಕೆ ಮತ್ತು ಇತರ ಕೃತ್ಯಗಳಿಗಾಗಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಬಂಧನಕ್ಕೆ ಪ್ರಯತ್ನ ಮುಂದುವರಿದಿದೆ ಎಂದು ಜರಿಪಾಟಕ್ ಪೊಲೀಸ್ ಠಾಣೆಯ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News