ಬ್ರಿಟನ್ ರಾಣಿಯ ಅಂತ್ಯಕ್ರಿಯೆಗೆ ರಶ್ಯ, ಮ್ಯಾನ್ಮಾರ್ ಗೆ ಆಹ್ವಾನವಿಲ್ಲ

Update: 2022-09-13 15:59 GMT

ಲಂಡನ್, ಸೆ.13: ಮುಂದಿನ ಸೋಮವಾರ ನಡೆಯಲಿರುವ ಬ್ರಿಟನ್ ರಾಣಿ ಎಲಿಝಬೆತ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರಶ್ಯ, ಮ್ಯಾನ್ಮಾರ್ ಮತ್ತು ಬೆಲಾರಸ್ನ ಪ್ರತಿನಿಧಿಗಳನ್ನು ಬ್ರಿಟನ್ ಆಹ್ವಾನಿಸಿಲ್ಲ ಎಂದು ಮೂಲಗಳು ಹೇಳಿವೆ.

‌ಲಂಡನ್ನಲ್ಲಿ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ಸುಮಾರು 500 ವಿದೇಶಿ ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಬ್ರಿಟನ್ ರಾಜತಾಂತ್ರಿಕ ಬಾಂಧವ್ಯ ಹೊಂದಿರುವ ಎಲ್ಲಾ ದೇಶಗಳ ಮುಖ್ಯಸ್ಥರನ್ನೂ ಆಹ್ವಾನಿಸಲಾಗಿದೆ ಎಂದು ಬಿಬಿಸಿ ಹೇಳಿದೆ. ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ರಶ್ಯ ಮತ್ತು ಅದರ ಮಿತ್ರದೇಶ ಬೆಲಾರಸ್ ಅನ್ನು ಬ್ರಿಟನ್ ಹಾಗೂ ಪಾಶ್ಚಿಮಾತ್ಯ ದೇಶಗಳು ಜಾಗತಿಕ ವೇದಿಕೆಯಲ್ಲಿ ದೂರ ಇರಿಸಲು ನಿರ್ಧರಿಸಿವೆ. ಮ್ಯಾನ್ಮಾರ್ನಲ್ಲಿರುವ ರೊಹಿಂಗ್ಯಾ ಸಮುದಾಯಕ್ಕೆ ಬೆಂಬಲ ಸೂಚಕವಾಗಿ ಅಲ್ಲಿನ ಸೇನಾಡಳಿತದ ವಿರುದ್ಧವೂ ರಶ್ಯ ನಿರ್ಬಂಧ ಜಾರಿಗೊಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News