×
Ad

ಮಾನ್ಯತೆ ರಹಿತ ಮದರಸಗಳ ಸಮೀಕ್ಷೆ ಆರಂಭಿಸಿದ ಉತ್ತರಪ್ರದೇಶ ಸರಕಾರ

Update: 2022-09-13 22:39 IST

ಲಕ್ನೋ, ಸೆ. 13: ಮಾನ್ಯತೆ ರಹಿತ ಮದರಸಗಳ ಸಮೀಕ್ಷೆಯನ್ನು ಉತ್ತರಪ್ರದೇಶ ಸರಕಾರ ಸೋಮವಾರ ಆರಂಭಿಸಿದೆ. ಮೂವರು ಸದಸ್ಯರ ಸಮಿತಿ ಮದರಸಗಳಿಗೆ ಭೇಟಿ ನೀಡುವ ಮೂಲಕ ಈ ಸಮೀಕ್ಷೆ ಆರಂಭಿಸಲಾಗಿದೆ. ಸಮಿತಿ ಹಣಕಾಸಿನ ಮೂಲ ಸೇರಿದಂತೆ 12 ಅಂಶಗಳ ಬಗ್ಗೆ ಮದರಸಗಳಿಂದ ಮಾಹಿತಿ ಕೋರಿದೆ. ಮದರಸಗಳ ಅದ್ಯಾಪಕರ ಸಂಖ್ಯೆ, ಪಠ್ಯಕ್ರಮಗಳಂತಹ ವಿಷಯಗಳನ್ನು ಸಂಗ್ರಹಿಸಲು ಮಾನ್ಯತೆ ರಹಿತ ಮದರಸಗಳ ಸಮೀಕ್ಷೆ ನಡೆಸಲಾಗುವುದು ಎಂದು ಉತ್ತರಪ್ರದೇಶ ಸರಕಾರ ಕಳೆದ ತಿಂಗಳು ಹೇಳಿತ್ತು.

 ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಅಗತ್ಯಕ್ಕೆ ಅನುಗುಣವಾಗಿ ಮದರಸದ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಮೀಕ್ಷೆ ನಡೆಸಲಾಗುವುದು ಎಂದು ಕೇಂದ್ರದ ಸಹಾಯಕ ಸಚಿವ ದಾನಿಶ್ ಅಝಾದ್ ಅನ್ಸಾರಿ ಅವರು ಆಗಸ್ಟ್ 31ರಂದು ಹೇಳಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News