ಮಲ್ಪೆ: ವಿವಾಹಿತೆ ಆತ್ಮಹತ್ಯೆ

Update: 2022-09-13 17:10 GMT

ಮಲ್ಪೆ, ಸೆ.13: ಗಂಡ ಮಾಡಿದ ಸಾಲದಿಂದ ಕಂಗೆಟ್ಟ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ಕೊಡವೂರಿನ ಕಾನಂಗಿಯಿಂದ ವರದಿಯಾಗಿದೆ.

ಕೊಡವೂರು ಕಾನಂಗಿಯ ಬೀನಾರಾಣಿ (34) ಆತ್ಮಹತ್ಯೆಗೆ ಶರಣಾದ ಯುವತಿ. ಶಿರ್ವಾದ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದ ಬೀನಾರಾಣಿ, ಆರು ವರ್ಷಗಳ ಹಿಂದೆ ಗುಂಡಿಬೈಲು ನಿವಾಸಿ ನಿತ್ಯಾನಂದ ಎಂಬವರನ್ನು ವಿವಾಹವಾಗಿದ್ದರು. ಬೀನಾರ ಗಂಡ ವಿಪರೀತ ಸಾಲ ಮಾಡಿದ್ದು, ಸಾಲ ತೀರಿಸ ಲಾರದೇ 9 ತಿಂಗಳ ಹಿಂದೆ ಗುಂಡಿಬೈಲಿನ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ನಿತ್ಯಾನಂದ ಮಾಡಿದ ಸಾಲದ ಹೊರೆಯನ್ನು ತನ್ನ ಕಡಿಮೆ ಸಂಬಳದಲ್ಲಿ ತೀರಿಸಲಾಗದೇ ಇದರಿಂದ ತೀವ್ರವಾಗಿ ಮನನೊಂದು ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಬೀನಾರಣಿ, ಇಂದು ಬೆಳಗ್ಗೆ ತಾನು ವಾಸವಾಗಿದ್ದ ತಂದೆಯ ಕಾನಂಗಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News