ಖರೀದಿ ಒಪ್ಪಂದ; ಟ್ವಿಟ್ಟರ್ ಷೇರುದಾರರ ಒಲವು ಎತ್ತ ಗೊತ್ತೇ ?

Update: 2022-09-14 02:41 GMT

ವಾಷಿಂಗ್ಟನ್: ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಅವರು 44 ಶತಕೋಟಿ ಡಾಲರ್ ಮೊತ್ತಕ್ಕೆ ಟ್ವಿಟ್ಟರ್ ಖರೀದಿಸುವ ಬಗೆಗೆ ಮಾಡಿಕೊಂಡ ಒಪ್ಪಂದವನ್ನು, ಈ ಪ್ರಮುಖ ಸಾಮಾಜಿಕ ಜಾಲತಾಣದ ಷೇರುದಾರರು ಅನುಮೋದಿಸಿದ್ದಾರೆ.

ಟ್ವಿಟ್ಟರ್‌ನ ಪ್ರತಿ ಷೇರಿಗೆ 54.20 ಡಾಲರ್ ಆಫರ್ ಮಾಡಿರುವ ಎಲಾನ್ ಮಸ್ಕ್ ಪ್ರಸ್ತಾವನೆಯನ್ನು ಆಂಗೀಕರಿಸಲಾಗಿದ್ದು, ಇದು ಪ್ರಸ್ತುತ ಟ್ವಿಟ್ಟರ್ ಷೇರುಗಳ ವಹಿವಾಟು ದರವಾದ 42 ಡಾಲರ್‌ ಗಿಂತ ಅಧಿಕ. ಕಂಪನಿಯ ವಹಿವಾಟಿನಲ್ಲಿ ಸಮಸ್ಯೆಗಳಿವೆ ಎಂಬ ಕಾರಣ ನೀಡಿ ಒಪ್ಪಂದದಿಂದ ಹಿಂದೆ ಸರಿಯಲು ಮಸ್ಕ್ ಪ್ರಯತ್ನ ನಡೆಸುತ್ತಿದ್ದು, ಟ್ವಿಟ್ಟರ್ ಮಾತ್ರ ಒಪ್ಪಂದ ಜಾರಿಗೆ ಮುಂದಾಗಿದೆ.

ಮಂಗಳವಾರ ಷೇರುದಾರರು ಈ ಒಪ್ಪಂದಕ್ಕೆ ಅನುಮೋದನೆ ನೀಡಿದ್ದಾರೆ ಎಂದು ಕಂಪನಿ ಪ್ರಕಟಿಸಿದೆ. ಟ್ವಿಟ್ಟರ್ ಸಿಇಓ ಪರಾಗ್ ಅಗರ್‍ವಾಲ್ ಅವರ ಸಂಕ್ಷಿಪ್ತ ಭಾಷಣದ ಬಳಿಕ ವರ್ಚುವಲ್ ಸಭೆಯಲ್ಲಿ ಈ ಕುರಿತ ಮತದಾನ ನಡೆಯಿತು.

ಟ್ವಿಟ್ಟರ್ ವಿರುದ್ಧದ ದೂರನ್ನು ತಿದ್ದಪಡಿ ಮಾಡಲು ಮಸ್ಕ್ ಅವರಿಗೆ ಅಮೆರಿಕ ನ್ಯಾಯಾಧೀಶರು ಬುಧವಾರ ಅನುಮತಿ ನೀಡಿದ್ದಾರೆ. ಆದರೆ ಟ್ವಿಟ್ಟರ್ ಖರೀದಿಸುವ ಒಪ್ಪಂದವನ್ನು ರದ್ದು ಮಾಡುವ ಸಂಬಂಧದ ದಾವೆಯನ್ನು ವಿಳಂಬಿಸಲು ನಿರಾಕರಿಸಿದ್ದಾರೆ ಎಂದು timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News